ನಿನ್ನೆ ಸಂಜೆ ರಾಜುಗೆ ನೆಲಮಂಗಲದಲ್ಲಿ ಅಪಘಾತವಾಗಿತ್ತು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ರಾಜುಗೆ ರಕ್ತದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್'ಗೆ ಹೋಗಿ 1000 ರೂ ನೋಟು ಕೊಟ್ಟು ರಕ್ತದ ಬಾಟಲು ಕೇಳಿದ್ದಾರೆ. ಆದರೆ ಬ್ಲಡ್ ಬ್ಯಾಂಕ್ ಸಿಬ್ಬಂದಿ ಈ ನೋಟು ಬೇಡ ಚಿಲ್ಲರೆ ಕೊಡಿ ಎಂದಿದ್ದಾರೆ ಎನ್ನಲಾಗಿದೆ. ಬಳಿಕ ಸಂಬಂಧಿಕರು ಎಂ. ಎಸ್. ರಾಮಯ್ಯ ಆಸ್ಪತ್ರೆ ಬ್ಲಡ್ ಬ್ಯಾಂಕ್'ಗೆ ಹೋದಾಗ ಅಲ್ಲೂ ಹೀಗೇ ಆಗಿದೆ. ಆದರೆ ಅಷ್ಟೊತ್ತಿಗಾಗಲೇ ರಾಜು ಸಕಾಲಕ್ಕೆ ರಕ್ತ ಸಿಗದೇ ಮೃತಪಟ್ಟಿದ್ದಾರೆ.
ಬೆಂಗಳೂರು(ನ.12): ಚಿಲ್ಲರೆ ಕೊಡದ ಕಾರಣಕ್ಕಾಗಿ ಸಕಾಲದಲ್ಲಿ ರಕ್ತ ಸಿಗದೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೆಲಮಂಗಲದ ನಿವಾಸಿ 33 ವರ್ಷದ ರಾಜು ಎಂಬ ವ್ಯಕ್ತಿ ರಕ್ತ ಸಿಗದೇ ಮೃತಪಟ್ಟವರು.
ನಿನ್ನೆ ಸಂಜೆ ರಾಜುಗೆ ನೆಲಮಂಗಲದಲ್ಲಿ ಅಪಘಾತವಾಗಿತ್ತು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ರಾಜುಗೆ ರಕ್ತದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್'ಗೆ ಹೋಗಿ 1000 ರೂ ನೋಟು ಕೊಟ್ಟು ರಕ್ತದ ಬಾಟಲು ಕೇಳಿದ್ದಾರೆ. ಆದರೆ ಬ್ಲಡ್ ಬ್ಯಾಂಕ್ ಸಿಬ್ಬಂದಿ ಈ ನೋಟು ಬೇಡ ಚಿಲ್ಲರೆ ಕೊಡಿ ಎಂದಿದ್ದಾರೆ ಎನ್ನಲಾಗಿದೆ.
ಬಳಿಕ ಸಂಬಂಧಿಕರು ಎಂ. ಎಸ್. ರಾಮಯ್ಯ ಆಸ್ಪತ್ರೆ ಬ್ಲಡ್ ಬ್ಯಾಂಕ್'ಗೆ ಹೋದಾಗ ಅಲ್ಲೂ ಹೀಗೇ ಆಗಿದೆ. ಆದರೆ ಅಷ್ಟೊತ್ತಿಗಾಗಲೇ ರಾಜು ಸಕಾಲಕ್ಕೆ ರಕ್ತ ಸಿಗದೇ ಮೃತಪಟ್ಟಿದ್ದಾರೆ.
