ಕ್ಷುಲ್ಲಕ ಕಾರಣಕ್ಕೆ ವಾದ್ಯದವರನ್ನು ಚನ್ನಾಗಿ ಥಳಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂರು ದಿನಗಳಿಂದ ಚಿತ್ರದುರ್ಗದಲ್ಲಿ ಮಾರಮ್ಮನ ಜಾತ್ರೆ ನಡೆಯುತ್ತಿದ್ದು, ಕೊನೆಯ ದಿನ ತಮಟೆ ಬಾರಿಸುವವರು  ನನಗೆ ಹುಷಾರಿಲ್ಲ ಹಾಗಾಗಿ ಇವತ್ತು ತಮಟೆ ಬಾರಿಸುವುದಿಲ್ಲ ಎಂದಿದ್ದಕ್ಕೆ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಗರದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

ಚಿತ್ರದುರ್ಗ(ಡಿ.22): ಕ್ಷುಲ್ಲಕ ಕಾರಣಕ್ಕೆ ವಾದ್ಯದವರನ್ನು ಚನ್ನಾಗಿ ಥಳಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂರು ದಿನಗಳಿಂದ ಚಿತ್ರದುರ್ಗದಲ್ಲಿ ಮಾರಮ್ಮನ ಜಾತ್ರೆ ನಡೆಯುತ್ತಿದ್ದು, ಕೊನೆಯ ದಿನ ತಮಟೆ ಬಾರಿಸುವವರು ನನಗೆ ಹುಷಾರಿಲ್ಲ ಹಾಗಾಗಿ ಇವತ್ತು ತಮಟೆ ಬಾರಿಸುವುದಿಲ್ಲ ಎಂದಿದ್ದಕ್ಕೆ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಗರದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಥಳಿತಕ್ಕೊಳಗಾದವರನ್ನು ವಾದ್ಯಗಾರ ಕೊಟ್ರಪ್ಪ, ಗಂಗಮ್ಮ, ಹರೀಶ್ ಮತ್ತು ಪ್ರೇಮಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿರುವವರು ಸೋಮಾ, ಗುರು ಮೂರ್ತಿ, ಶಿವರುದ್ರಪ್ಪ ಹಾಗೂ ಓಂಕಾರಪ್ಪ ಇವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಸಾಲದಕ್ಕೆ ಆಸ್ಪತ್ರೆಗೆ ಹೋಗಲು ಆಟೋ ಹತ್ತಲು ಹೋದರೆ ಆಟೋದವರಿಗೆ 'ಹತ್ತಿಸಿದ್ರೆ ನಿಮಗೂ ಹೊಡೆಯುತ್ತೇವೆ' ಎಂದು ಹೆದರಿಸಿದ್ದಾರೆ. ಈ ಕಾರಣ ಆಟೋದವರೂ ನಮ್ಮನ್ನು ಹತ್ತಿಸಲಿಲ್ಲ. ನೋವಿನಲ್ಲೂ ಆಟೋ ಇಲ್ಲದೆ ನಡೆದುಕೊಂಡೇ ಬಂದು ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹಲ್ಲೆಗೊಳಗಾಗಿರುವವರ ಸಂಬಂಧಿ ಚೇತನ್ ಆರೋಪಿಸಿದ್ದಾರೆ.