Asianet Suvarna News Asianet Suvarna News

ದುರ್ವತನೆ ಪರಾಕಾಷ್ಠೆ, ಮಂಗನ ದೇಹಕ್ಕೆ ಪ್ರಧಾನಿ ಮುಖ!

ದೇಶದ ಪ್ರಧಾನಿಯನ್ನು ‘ಮಂಗ’ ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದನಿಗೆ ಜೖಲೂಟ ಕಾಯಂ ಆಗಿದೆ.  ಮಂಗನ ದೇಹಕ್ಕೆ ದೇಶದ ಪ್ರಧಾನಿ ತಲೆ ಕೂರಿಸಿದ್ದ ಫೋಟೋ ಹಂಚಿಕೊಂಡಿದ್ದವನೀಗ ಜೈಲಿನಲ್ಲಿದ್ದಾನೆ.

ಕಠಮಂಡು[ಆ.23] ನೇಪಾಳದ ಪ್ರಧಾನಿ ಖಡ್ಗಪ್ರಸಾದ್ ಓಲಿ ಅವರನ್ನು ಅವಹೇಳನ ಮಾಡಿದವನನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ. ಮಂಗನ ದೇಹಕ್ಕೆ ಪ್ರಧಾನಿಯ ತಲೆ ಬೆಸೆದಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು  ಬಂಧನಕ್ಕೆ ಗುರಿಯಾದವನ ಅಪರಾಧವಾಗಿದೆ.

ಹೋಮನಾಥ್ ಸಿಗ್ಡೆಲ್ [44] ಎಂಬಾತನನ್ನು ಪೊಲೀಸರು ಬಂಧಿಸಿದ್ದು ಈತ ಹಂಚಿಕೊಂಡಿದ್ದ ಫೋಟೋ 2500ಕ್ಕೂ ಅಧಿಕ ಶೇರ್ ಆಗಿತ್ತು. ಈತ ಬೆತ್ತಲೆ ಮನುಷ್ಯನ ದೇಹಕ್ಕೆ ಪ್ರಧಾಣಿಯ ತಲೆ ಅಂಟಿಸಿ ಮತ್ತೊಂದು ಫೋಟೋ ಸಹ ಷೇರ್ ಮಾಡಿದ್ದ.

ಬಂಧಿತನಿಗೆ 5 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಕೆನಡಾ ಮೂಲ ನಿವಾಸಿಯೊಬ್ಬ ನೇಪಾಳದ ಸರಕಾರದ ವಿರುದ್ಧ ಹಿಂದೊಮ್ಮೆ ಸರಣಿ ಟ್ವೀಟ್ ಮಾಡಿದ್ದರು. ನಂತರ ಅವರನ್ನು ವಿಚಾರಣೆಗೆ ಗುರಿ ಮಾಡಲಾಗಿತ್ತು.

Man arrested over Facebook post depicting Nepal PM as monkey
Author
Bengaluru, First Published Aug 23, 2018, 7:51 PM IST

ಕಠಮಂಡು[ಆ.23] ನೇಪಾಳದ ಪ್ರಧಾನಿ ಖಡ್ಗಪ್ರಸಾದ್ ಓಲಿ ಅವರನ್ನು ಅವಹೇಳನ ಮಾಡಿದವನನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ. ಮಂಗನ ದೇಹಕ್ಕೆ ಪ್ರಧಾನಿಯ ತಲೆ ಬೆಸೆದಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು  ಬಂಧನಕ್ಕೆ ಗುರಿಯಾದವನ ಅಪರಾಧವಾಗಿದೆ.

ಹೋಮನಾಥ್ ಸಿಗ್ಡೆಲ್ [44] ಎಂಬಾತನನ್ನು ಪೊಲೀಸರು ಬಂಧಿಸಿದ್ದು ಈತ ಹಂಚಿಕೊಂಡಿದ್ದ ಫೋಟೋ 2500ಕ್ಕೂ ಅಧಿಕ ಶೇರ್ ಆಗಿತ್ತು. ಈತ ಬೆತ್ತಲೆ ಮನುಷ್ಯನ ದೇಹಕ್ಕೆ ಪ್ರಧಾಣಿಯ ತಲೆ ಅಂಟಿಸಿ ಮತ್ತೊಂದು ಫೋಟೋ ಸಹ ಷೇರ್ ಮಾಡಿದ್ದ.

ಬಂಧಿತನಿಗೆ 5 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಕೆನಡಾ ಮೂಲ ನಿವಾಸಿಯೊಬ್ಬ ನೇಪಾಳದ ಸರಕಾರದ ವಿರುದ್ಧ ಹಿಂದೊಮ್ಮೆ ಸರಣಿ ಟ್ವೀಟ್ ಮಾಡಿದ್ದರು. ನಂತರ ಅವರನ್ನು ವಿಚಾರಣೆಗೆ ಗುರಿ ಮಾಡಲಾಗಿತ್ತು.

Follow Us:
Download App:
  • android
  • ios