ಕಚೇರಿ ಕೆಲಸಕ್ಕೆ ಮಾಡಿಕೊಳ್ಳುವ ವಾಟ್ಸಪ್ ಗ್ರೂಪ್ ಗಳು ಎಂಥೆಂಥ ಎಡವಟ್ಟಿಗೆ ಕಾರಣವಾಗಬಹುದು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗುತ್ತದೆ.  ಕಂಪನಿ ಉಪಯೋಗಕ್ಕೆಂದು ಗ್ರೂಪ್ ಮಾಡಿ ಸೇರಿಸಿಕೊಳ್ಳುವ ಮುನ್ನ ವ್ಯಕ್ತಿಯ ಪೂರ್ವಾಪರವನ್ನು ಇನ್ನೊಮ್ಮೆ ಲೆಕ್ಕಕ್ಕೆ ಹಾಕಿಕೊಳ್ಳುವುದು ಒಳಿತು.

ಬೆಂಗಳೂರು[ಜು.2] ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದವ 15 ದಿನದಲ್ಲೇ ಕೆಲಸ ಬಿಟ್ಟಿದ್ದ. ಕೆಲಸದ ಅನುಕೂಲಕ್ಕೆಂದು ಆತನನ್ನು ವಾಟ್ಸಪ್ ಗ್ರೂಪ್ ಗೆ ಸೇರಿಸಲಾಗಿತ್ತು. ಗ್ರೂಪ್ ನಲ್ಲಿದ್ದ ಮಹಿಳಾ ಸಿಬ್ಬಂದಿ ನಂಬರ್ ಸೇವ್ ಮಾಡಿಕೊಂಡವ ಅಶ್ಲೀಲ ಸಂದೇಶ ರವಾನೆ ಮಾಡಲು ಆರಂಭಿಸಿದ್ದ.

ಬೆಂಗಳೂರಿನಲ್ಲಿಯೇ ಇಂಥದ್ದೊಂದು ಪ್ರಕರಣ ನಡೆದಿದ್ದು ಮಹಿಳಾ ಉದ್ಯೋಗಿಗಳಿಗೆ ಒಂದು ಎಚ್ಚರಿಕೆ ಘಂಟೆಯಾಗಿದೆ. ಕಾಮುಕನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಎಚ್ಚರಿಕೆ ನೀಡಿದ್ದರೂ ಮತ್ತೆ ಮತ್ತೆ ಸಂದೇಶ ಕಳುಹಿಸುತ್ತಿದ್ದ. ಇವರಲ್ಲಿ ಒಂದು ಯುವತಿಗೆ ಕಾಟ ಕೊಡುತ್ತಿದ್ದ ಕಾಮುಕ ಬೈಕ್ ನಲ್ಲಿ ಹಿಂಬಾಲಿಸಿ ಅಶ್ಲೀಲ ಸನ್ನೆ ಮಾಡುತ್ತಿದ್ದ. ಅಲ್ಲದೇ ಆಕೆಯ ಬಟ್ಟೆ ಹರಿದು ಅವಮಾನ ಮಾಡಿದ್ದ ಬೇಸತ್ತ ಯುವತಿ ಪೊಲೀಸರ ಮೊರೆ ಹೋಗಿದ್ದು ಆರೋಪಿ ಅರುಣ್ ಈಗ ಪೊಲೀಸರ ವಶದಲ್ಲಿದ್ದಾನೆ. ಸಹದ್ಯೋಗಿಗಳೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.