ಹುಬ್ಬಳ್ಳಿಯಲ್ಲಿ ತಲ್ವಾರ್ ಹಿಡಿದು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆನಂದ್ ನಗರದಲ್ಲಿ ರಾತ್ರೋ ರಾತ್ರಿ ತಲ್ವಾರ್ ಹಿಡಿದುಕೊಂಡು ಬೈಕ್’ನಲ್ಲಿ ತಿರುಗುತ್ತಿದ್ದ ಎನ್ನಲಾಗಿದೆ. ಈತನ ವರ್ತನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಹುಬ್ಬಳ್ಳಿ (ಜ.08): ಹುಬ್ಬಳ್ಳಿಯಲ್ಲಿ ತಲ್ವಾರ್ ಹಿಡಿದು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆನಂದ್ ನಗರದಲ್ಲಿ ರಾತ್ರೋ ರಾತ್ರಿ ತಲ್ವಾರ್ ಹಿಡಿದುಕೊಂಡು ಬೈಕ್’ನಲ್ಲಿ ತಿರುಗುತ್ತಿದ್ದ ಎನ್ನಲಾಗಿದೆ. ಈತನ ವರ್ತನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈತನನ್ನು ಬಂಧಿಸಿದ್ದಾರೆ. ಅಲ್ಲದೇ ಈತನ ಬಳಿ ಇದ್ದ ಪಲ್ಸರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಜಾವೀದ್ ರಬ್ಬಾನಿ ಎಂದು ಗುರುತಿಸಲಾಗಿದ್ದು, ಬಶೀರ್ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ತಲ್ವಾರ್ ಹಿಡಿದು ತಿರುಗುತ್ತಿದ್ದ ಎನ್ನಲಾಗಿದೆ.