Asianet Suvarna News Asianet Suvarna News

ಇದು ಆಧಾರರಹಿತ, ಉಪಯೋಗಕ್ಕೆಬಾರದ ಬಜೆಟ್ : ಮಮತಾ ಬ್ಯಾನರ್ಜಿ ಖಂಡನೆ

ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಕೇವಲ ಅಂಕಿ-ಸಂಖ್ಯೆಗಳ ಜೊತೆ ಆಟವಾಡುತ್ತಿದ್ದಾರೆ. ನೋಟು ನಿಷೇಧದ ನಂತರ ಅಂಕಿ-ಅಂಶಗಳ ಮಾಹಿತಿಯನ್ನು ಬಹಿರಂಗಪಡಿಸಬಹುದಿತ್ತು ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mamtha Banarjee dubs Jaitley budget As misleading full of jugglery

ನವದೆಹಲಿ (ಫೆ.01): ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ ಬಜೆಟನ್ನು ತೃಣಮೂಲ ಕಾಂಗ್ರೆಸ್ ವರಿಷ್ಟೆ ಮಮತಾ ಬ್ಯಾನರ್ಜಿ ಕಟುವಾಗಿ ಖಂಡಿಸಿದ್ದಾರೆ.

ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಕೇವಲ ಅಂಕಿ-ಸಂಖ್ಯೆಗಳ ಜೊತೆ ಆಟವಾಡುತ್ತಿದ್ದಾರೆ. ನೋಟು ನಿಷೇಧದ ನಂತರ ಅಂಕಿ-ಅಂಶಗಳ ಮಾಹಿತಿಯನ್ನು ಬಹಿರಂಗಪಡಿಸಬಹುದಿತ್ತು ಎಂದು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹುನಿರೀಕ್ಷಿತ ಬಜೆಟ್ 2017 ವಿವಾದಾತ್ಮಕವಾದುದು. ಇದೊಂದು ಆಧಾರರಹಿತ, ಉಪಯೋಗಕ್ಕೆ ಬಾರದ, ಮುನ್ನೋಟವಿಲ್ಲದ್ದಾಗಿದೆ. ತೆರಿಗೆ ಪಾವತಿದಾರರಿಗೆ ರಿಲೀಫ್ ನೀಡಿದ್ದರೂ ಸಹ ವಿತ್ ಡ್ರಾ ಮಿತಿಯಲ್ಲಿ ಮಾತ್ರ ನಿರ್ಬಂಧವಿದೆ. ಕೂಡಲೇ ಈ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿ ಎಂದು ದೀದಿ ಹೇಳಿದ್ದಾರೆ.

Follow Us:
Download App:
  • android
  • ios