ರಾಜ್ಯಪಾಲ ಕೇಸರ್ ನಾಥ್ ತ್ರಿಪಾಠಿ ತನ್ನನ್ನು ನಿಂದಿಸಿ, ಬೆದರಿಕೆ ಹಾಕಿದ್ದಾರೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೊಪಿಸಿದ್ದಾರೆ. ಆದರೆ ರಾಜಭವನವು ಈ ಆರೋಪಗಳನ್ನು ಅಲ್ಲಗಳೆದಿದೆ.

ಕೋಲ್ಕತ್ತಾ (ಜು.04): ರಾಜ್ಯಪಾಲ ಕೇಸರ್ ನಾಥ್ ತ್ರಿಪಾಠಿ ತನ್ನನ್ನು ನಿಂದಿಸಿ, ಬೆದರಿಕೆ ಹಾಕಿದ್ದಾರೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೊಪಿಸಿದ್ದಾರೆ. ಆದರೆ ರಾಜಭವನವು ಈ ಆರೋಪಗಳನ್ನು ಅಲ್ಲಗಳೆದಿದೆ.

ಇವತ್ತು ರಾಜ್ಯಪಾಲರು ನನ್ನನ್ನು ಬೆದರಿಕೆ ಹಾಕಿದ್ದಾರೆ ಹಾಗೂ ನಿಂದಿದಿ ಅವಮಾನ ಮಾಡಿದ್ದಾರೆ. ನಾನು ಚುನಾಯಿತ ಪ್ರತಿನಿಧಿ, ಅವರು ನೇಮಿಸಲ್ಪಟ್ಟವರು. ನೀವು ಈ ರೀತಿ ಮಾತನಾಡುವಂತಿಲ್ಲವೆಂದು ನಾನವರಿಗೆ ಹೇಳಿದ್ದೇನೆ, ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ರಾಜ್ಯಪಾಲರು ಬಿಜೆಪಿಯ ಬ್ಲಾಕ್ ಅಧ್ಯಕ್ಷರಂತೆ ವರ್ತಿಸುತ್ತಿದದ್ದಾರೆ, ಎಂದು ಮಮತಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಆರೋಪಗಳನ್ನು ನಿರಾಕರಿಸಿರುವ ರಾಜಭವನವು, ರಾಜ್ಯಪಾಲರು ಯಾವುದೇ ರೀತಿಯ ಆಕ್ಷೇಪಕಾರಿ ವರ್ತನೆ ತೋರಿಲ್ಲ, ರಾಜ್ಯದಲ್ಲಿ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವಂತೆ ಮುಖ್ಯಮಂತ್ರಿಗೆ ತಾಕೀತು ಮಾಡಿದ್ದಾರೆ, ಎಂದು ಹೇಳಿದೆ.

ಬದುರಿಯಾ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಭಧಿಸಿ ಮಾತನಾಡಲು ಇಂದು ರಾಜ್ಯಪಾಲರು ಮಮತಾ ಬ್ಯಾನರ್ಜಿಯನ್ನು ರಾಜಭವನಕ್ಕೆ ಕರೆಸಿದ್ದರು.