ಕೋಲ್ಕತಾ[ಜೂ.27]: ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಜೆಪಿಯ ಪ್ರಭಾವವನ್ನು ತಡೆಯಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಂದು ಕಾಲದಲ್ಲಿ ತಮ್ಮ ಬದ್ಧ ವೈರಿಯಾಗಿದ್ದ ಎಡರಂಗ ಮತ್ತು ಕಾಂಗ್ರೆಸ್‌ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, ‘ಬಿಜೆಪಿ ಸಂವಿಧಾನವನ್ನು ಬದಲಾಯಿಸಲಿದೆ ಎಂಬುದು ನನ್ನ ಆತಂಕವಾಗಿದೆ. ನನ್ನ ಪ್ರಕಾರ, ಬಿಜೆಪಿಯ ವಿರುದ್ಧ ಹೋರಾಡಲು ಎಡರಂಗ ಮತ್ತು ಕಾಂಗ್ರೆಸ್‌ ಸೇರಿದಂತೆ ನಾವೆಲ್ಲರೂ ಒಂದಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಮಮತಾ ಬ್ಯಾನರ್ಜಿ ರಾಷ್ಟ್ರ ಮಟ್ಟದಲ್ಲಿ ಎಡರಂಗ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿಯ ಬಗ್ಗೆ ಒಲವು ತೋರಿದ್ದರು. ಆದರೆ, ಇದೇ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಕಾಂಗ್ರೆಸ್‌ ಮತ್ತು ಎಡರಂಗವನ್ನು ಮೈತ್ರಿಗೆ ಆಹ್ವಾನಿಸಿದ್ದಾರೆ.