ದುರ್ಗಾಪೂಜೆ ಸಂದರ್ಭದಲ್ಲಿ ಶಾಂತಿ ಕದಡುವ ಆರ್’ಎಸ್’ಎಸ್ ಹಾಗೂ ಅದರ ವಿಶ್ವ ಹಿಂದೂ ಪರಿಷತ್ ಹಾಗೂ ಅದರ ಅಂಗಸಂಸ್ಥೆಗಳಾದ ಭಜರಂಗದಳ, ವಿಶ್ವಹಿಂದೂ ಪರಿಷತ್’ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಕಿ ಜೊತೆ ಆಟವಾಡಬೇಡಿ ಎಂದು ಖಡರ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಸೆ.16): ದುರ್ಗಾಪೂಜೆ ಸಂದರ್ಭದಲ್ಲಿ ಶಾಂತಿ ಕದಡುವ ಆರ್’ಎಸ್’ಎಸ್ ಹಾಗೂ ಅದರ ವಿಶ್ವ ಹಿಂದೂ ಪರಿಷತ್ ಹಾಗೂ ಅದರ ಅಂಗಸಂಸ್ಥೆಗಳಾದ ಭಜರಂಗದಳ, ವಿಶ್ವಹಿಂದೂ ಪರಿಷತ್’ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಕಿ ಜೊತೆ ಆಟವಾಡಬೇಡಿ ಎಂದು ಖಡರ್ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯದಶಮಿ ದಿನ ರಾಜ್ಯಾದ್ಯಂತ ಆಯುಧ ಪೂಜೆ ಆಚರಿಸಲು ವಿಎಚ್’ಪಿ ನಿರ್ಧರಿಸಿದ್ದು ಇದಕ್ಕೆ ಮಮತಾ ಬ್ಯಾನರ್ಜಿ ತೀವ್ರ ಗರಂ ಆಗಿದ್ದಾರೆ. ಬೆಂಕಿ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅಂತಹ ಘಟನೆಗಳೇನಾದರೂ ಕಂಡು ಬಂದರೆ ತಡೆಯಿರಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ವಿಜಯ ದಶಮಿ ದಿನ ಆಯುಧ ಪೂಜೆಯನ್ನು ನಡೆಸಲು ಮುಂದಾದರೆ ಅದನ್ನು ತಡೆಯಿರಿ ಎಂದು ಮಮತಾ ಬ್ಯಾನರ್ಜಿ ಪೊಲೀಸರಿಗೆ ಸೂಚನೆ ನೀಡಿದ್ದರು. ಅ.01 ರಂದು ಮೊಹರಂ ಇರುವ ಪ್ರಯುಕ್ತ ಸೆ. 30 ರ ದಿನ ಸಂಜೆ 6 ಗಂಟೆ ನಂತರ ದುರ್ಗಾಮೂರ್ತಿಯನ್ನು ಮುಳುಗಿಸುವಂತಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಮತಾ ಬ್ಯಾನರ್ಜಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ.