ನವದೆಹಲಿ[ಫೆ.28] ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಹೋರಾಟ ಒಂದು ಕಡೆ ಆರಂಭವಾಗಿದ್ದರೆ ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೇರೆಯದೆ ತೆರನಾದ ಹೇಳಿಕೆ ನೀಡಿದ್ದಾರೆ.

ಸರ್ಜಿಕಲ್ ದಾಳಿಯಾದ ನಂತರ ಪ್ರಧಾನಿ ಯಾವುದೇ ಸರ್ವ ಪಕ್ಷ ಸಭೆ ನಡೆಸಿಲ್ಲ. ನಮಗೆ ಆಪರೇಶನ್ ನ ಎಲ್ಲ ವಿವರ ಗೊತ್ತಾಗಬೇಕಿದೆ ಎಂದು ಮಮತಾ ಹೇಳಿದ್ದಾರೆ.

ಅಭಿನಂದನ್ ಬರುತ್ತಿದ್ದಾರೆ: 10 ಕಾರಣಗಳು

ಎಲ್ಲಿ ಬಾಂಬ್ ಎಸೆಯಲಾಯಿತು? ಎಷ್ಟು ಜನ ಹತರಾದರು ಎಂಬ ವಿವರ ನೀಡಬೇಕು ಎಂದು ಆಗ್ರಹಿಸಿರುರುವ ಮಮತಾ ವಿದೇಶಿ ಮಾಧ್ಯಮಗಳನ್ನು ಒಳಕ್ಕೆ ಎಳೆದು ತಂದಿದ್ದಾರೆ. ಕೆಲ ,ಮಾಧ್ಯಮಗಳು ಹೇಳುವಂತೆ ದಾಳಿಯಲ್ಲಿ ಒಬ್ಬರೂ ಹತರಾಗಿಲ್ಲ. ಇನ್ನು ಕೆಲ ಮಾಧ್ಯಮಗಳ ಪ್ರಕಾರ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಹಾಗಾಗಿ ಇಡೀ ದೇಶಕ್ಕೆ ಸತ್ಯ ಗೊತ್ತಾಗಬೇಕು ಎಂದು ಮಮತಾ ಹೇಳಿದ್ದಾರೆ.