Asianet Suvarna News Asianet Suvarna News

ಗೋಮಾಂಸ ನಿಷೇಧ: ಬಿಜೆಪಿಗೆ ಸಡ್ಡು ಹೊಡೆಯಲು ಮಮತಾ ತಂತ್ರ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ತಮ್ಮ ರಾಜ್ಯದ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳಿಗೆ ಗೋವುಗಳನ್ನು ಉಡುಗೊರೆ ನೀಡಲು ಮುಂದಾಗಿದ್ದಾರೆ. ತನ್ಮೂಲಕ ರೈತರನ್ನು ಸೆಳೆಯಲು ತಾವೂ ಗೋ ರಾಜಕಾರಣಕ್ಕೆ ಇಳಿದಿದ್ದಾರೆ.

Mamat Banerjee Prepares Counter Plan Against BJP Over Beef Ban
  • Facebook
  • Twitter
  • Whatsapp

ಕೋಲ್ಕತಾ: ಗೋವಿನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂಷಿಸುತ್ತಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ತಮ್ಮ ರಾಜ್ಯದ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳಿಗೆ ಗೋವುಗಳನ್ನು ಉಡುಗೊರೆ ನೀಡಲು ಮುಂದಾಗಿದ್ದಾರೆ. ತನ್ಮೂಲಕ ರೈತರನ್ನು ಸೆಳೆಯಲು ತಾವೂ ಗೋ ರಾಜಕಾರಣಕ್ಕೆ ಇಳಿದಿದ್ದಾರೆ.

ಹಾಲು ಮಾರಾಟ ಮೂಲಕ ರೈತರು ಆದಾಯ ಹೆಚ್ಚಿಸಿಕೊಳ್ಳಲು, ಸಗಣಿ ಬಳಸಿ ಪರಿಸರ ಸ್ನೇಹಿ ಇಂಧನ ತಯಾರಿಸಲು ಹಾಗೂ ಸಾವಯವ ಕೃಷಿಗೆ ಉತ್ತೇಜಿಸಲು ಮಮತಾ ಈ ಯೋಜನೆ ಹಮ್ಮಿಕೊಂಡಿದ್ದಾರೆ. ಈ ಯೋಜನೆಗೆ ಬಂಗಾಳ ಸರ್ಕಾರವೇ ಸಂಪೂರ್ಣ ಅನುದಾನ ಭರಿಸುತ್ತದೆ.

Follow Us:
Download App:
  • android
  • ios