200 ಕೋಟಿ ರೂಪಾಯಿ ಮೌಲ್ಯದ ಮಹಾರಾಷ್ಟ್ರದ ಫಾರ್ಮ್ ಹೌಸ್, ಬೆಂಗಳೂರಿನಲ್ಲಿರುವ 800 ಕೋಟಿ ರೂ. ಮೌಲ್ಯದ ಮಾಲ್, 3000 ಕೋಟಿ ರೂಪಾಯಿಯ ಯುಬಿಎಲ್ ಮತ್ತು ಯುಎಸ್ಎಲ್ ಷೇರುಗಳನ್ನೂ ಜಪ್ತಿ
ನವದೆಹಲಿ(ಸೆ.03): ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಸುಸ್ತಿದಾರನಾಗಿರುವ ಮದ್ಯ ದೊರೆ ಮಲ್ಯ ಒಡೆತನದ 6,630 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಒಂದು ಮಾಲ್, ಒಂದು ಫಾರ್ಮ್ ಹೌಸ್ ಮತ್ತು ಹಲವು ಷೇರುಗಳು ಸೇರಿದಂತೆ ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆಯ ಆಸ್ತಿಯನ್ನ ಜಪ್ತಿ ಮಾಡಲಾಗಿದೆ.
ಟೈನ್ಸ್ ನೌ ವರದಿಗಳ ಪ್ರಕಾರ, 200 ಕೋಟಿ ರೂಪಾಯಿ ಮೌಲ್ಯದ ಮಹಾರಾಷ್ಟ್ರದ ಫಾರ್ಮ್ ಹೌಸ್, ಬೆಂಗಳೂರಿನಲ್ಲಿರುವ 800 ಕೋಟಿ ರೂ. ಮೌಲ್ಯದ ಮಾಲ್, 3000 ಕೋಟಿ ರೂಪಾಯಿಯ ಯುಬಿಎಲ್ ಮತ್ತು ಯುಎಸ್ಎಲ್ ಷೇರುಗಳನ್ನೂ ಜಪ್ತಿ ಮಾಡಲಾಗಿದೆ..
