9 ಸಾವಿರ ಕೋಟಿ ರು. ಸಾಲ ಮಾಡಿ ಲಂಡನ್‌ಗೆ ಪರಾರಿಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ ಮಲ್ಯ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರಿಗೆ ಕೆಲವು ‘ಅನುಕೂಲ’ಗಳನ್ನು ಮಾಡಿಕೊಟ್ಟಿದ್ದರು ಎಂದು ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ.

ನವದೆಹಲಿ: 9 ಸಾವಿರ ಕೋಟಿ ರು. ಸಾಲ ಮಾಡಿ ಲಂಡನ್‌ಗೆ ಪರಾರಿಯಾದ ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ ಮಲ್ಯ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಅವರಿಗೆ ಕೆಲವು ‘ಅನುಕೂಲ’ಗಳನ್ನು ಮಾಡಿಕೊಟ್ಟಿದ್ದರು ಎಂದು ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ.

38 ದಿನಗಳ ಹಿಂದೆ ಗಂಭೀರ ಅಪರಾಧಗಳ ತನಿಖಾ ಕಚೇರಿಯು ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದು, ಅದರಲ್ಲಿ ಈ ಸಂಗತಿ ಇದೆ ಎಂದು ವರದಿ ತಿಳಿಸಿದೆ.

ಯುಪಿಎ-2 ಅವಧಿಯಲ್ಲಿ ಸೋನಿಯಾ ಹಾಗೂ ಅವರ ಕುಟುಂಬ ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಪ್ರಯಾಣ ಮಾಡುವಾಗ ಎಕಾನಮಿ ದರ್ಜೆಯಲ್ಲಿನ ಟಿಕೆಟ್‌ಗಳನ್ನು ಬಿಸಿನೆಸ್ ಕ್ಲಾಸ್‌ಗೆ ಉನ್ನತೀಕರಣಗೊಳಿಸಲಾಗಿದೆ. ಇದಕ್ಕೆ ಖುದ್ದು ಮಲ್ಯ ಶಿಫಾರಸು ಮಾಡಿದ್ದರು .

ಇನ್ನು 2008 ರಲ್ಲಿ ಫಾರೂಖ್ ಅಬ್ದುಲ್ಲಾ ಅವರು ಖಾಸಗಿ ಹೆಲಿಕಾಪ್ಟರ್ ಬಳಸಿದಾಗ ಅದರ ಬಿಲ್ ಅನ್ನು ಖುದ್ದು ಮಲ್ಯ ಭರಿಸಿದ್ದರು. ಇದರ ಹಿಂದೆ ‘ಕೊಡುಕೊಳ್ಳುವಿಕೆ ಹಿತಾಸಕ್ತಿ’ ಅಡಗಿದೆ ಎನ್ನಲಾಗಿದೆ.