ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರತಿಷ್ಟಾಪಿಸಿರುವ ರಾಜ್ಯ ಮಟ್ಟದ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಎರಡು ಲಕ್ಷ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ.
ಬೆಂಗಳೂರು (ಆ.18): ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರತಿಷ್ಟಾಪಿಸಿರುವ ರಾಜ್ಯ ಮಟ್ಟದ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಎರಡು ಲಕ್ಷ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ.
ದೇವರಾಜ ಅರಸುರವರಿಗೆ ಖರ್ಗೆಯವರು ಅತ್ಯಂತ ನಿಕಟವರ್ತಿಯಾಗಿದ್ದರು. ಜೀವನದುದ್ದಕ್ಕೂ ಸಮಾಜವಾದಿ ಹಾಗೂ ಜಾತ್ಯಾತೀತ ಆಶಯಗಳನ್ನು ಅಳವಡಿಸಿಕೊಂಡು ಅದಕ್ಕೆ ಬದ್ದವಾಗಿ ನಡೆದುಕೊಂಡಿದ್ದಾರೆ.
ದೇವರಾಜ ಅರಸು ಅವರ ಸರ್ಕಾರದಲ್ಲಿ ಅಕ್ಟ್ರಾಯ್ ಪದ್ಧತಿ ನಿಷೇಧ ಸಮಿತಿ ಅಧ್ಯಕ್ಷರಾಗಿ 1973 ರಲ್ಲಿ ಖರ್ಗೆ ನೀಡಿದ ವರದಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಜಾರಿಯಿದ್ದ ಅಕ್ಟ್ರಾಯ್ ಪದ್ಧತಿ ನಿಷೇಧಗೊಂಡಿತು. 1974 ರಲ್ಲಿ ಜಗಜೀವನ್ ರಾಮ್ ಚರ್ಮ ಕೈಗಾರೀಕೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಅದರ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಹೀಗೆ ಖರ್ಗೆಯವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಪರವಾಗಿ, ಬಡವರ ಧ್ವನಿಯಾಗಿ ದುಡಿದವರು.
