ದೇವೇಗೌಡರು ಅವರ ಜೊತೆ ಕೂಡ ಟಚ್ ನಲ್ಲಿದ್ದರಂತೆ. ಅಂದರೆ ದೇವೇಗೌಡರು ಒಂದೇ ಸಮಯದಲ್ಲಿ ಸಿದ್ದರಾಮಯ್ಯ, ದೇಶಪಾಂಡೆ, ಖರ್ಗೆ, ಪರಂ, ಧರ್ಮಸಿಂಗ್‌ರಿಗೆ ಅಧಿಕಾರದ ಕುರ್ಚಿ ತೋರಿಸುತ್ತಿದ್ದರು

2004ರಲ್ಲಿ ದಿಲ್ಲಿಗೆ ಹೋಗಿ ಕಾಂ ಗ್ರೆಸ್‌ನವರನ್ನು ಒಪ್ಪಿಸಿ ಮುಖ್ಯಮಂತ್ರಿ ಮಾಡುತ್ತೇನೆ ಎಂದಿದ್ದರು, ನಂತರ ಕೈಕೊಟ್ಟರು ಎಂದು ಸಿದ್ದರಾಮಯ್ಯ
ಅವರು ದೇವೇಗೌಡರಿಂದ ದೂರವಾದದ್ದು ಗೊತ್ತಿರುವ ವಿಷಯವೇ. ಈಗ ದೇಶಪಾಂಡೆ, ‘2004ರಲ್ಲಿ ದೇವೇಗೌಡರು ನೀನೇ ಮುಖ್ಯಮಂತ್ರಿ ಎಂದು ಅಟ್ಟ ಹತ್ತಿಸಿದ್ದರು’ ಎನ್ನುತ್ತಿದ್ದಾರೆ. ಜಿ.ಪರಮೇಶ್ವರ್ ಕೂಡ ಪತ್ರಕರ್ತರ ಬಳಿ ‘2004ರಲ್ಲಿ ದೇವೇಗೌಡರು ನನ್ನ ಜಾತಕ ತೆಗೆದು ಕೊಂಡು ಕಾಶಿ ಜ್ಯೋತಿಷಿ ಹತ್ತಿರ ಹೋಗಿದ್ದರು’ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಖರ್ಗೆ ಹೇಳುವ ಪ್ರಕಾರ, ದೇವೇಗೌಡರು ಅವರ ಜೊತೆ ಕೂಡ ಟಚ್ ನಲ್ಲಿದ್ದರಂತೆ. ಅಂದರೆ ದೇವೇಗೌಡರು ಒಂದೇ ಸಮಯದಲ್ಲಿ ಸಿದ್ದರಾಮಯ್ಯ, ದೇಶಪಾಂಡೆ, ಖರ್ಗೆ, ಪರಂ, ಧರ್ಮಸಿಂಗ್‌ರಿಗೆ ಅಧಿಕಾರದ ಕುರ್ಚಿ ತೋರಿಸುತ್ತಿದ್ದರು ಎನಿಸುತ್ತದೆ. ಗೌಡರ ಮನ ಬಲ್ಲವರು ಯಾರು.

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)