Asianet Suvarna News Asianet Suvarna News

ರಿಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ ಇದ್ದ ಮಗು ಸಂಜೆ ನಾಪತ್ತೆ: ದಿಕ್ಕು ತೋಚದೆ ಕುಳಿತಿರುವ ಹಸಿ ಬಾಣಂತಿ

ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೇ ಕಂದಮ್ಮಗಳ ಕಳ್ಳತನ ಜಾಸ್ತಿಯಾಗುತ್ತಿದೆ. ಇದೀಗ ರಾಯಚೂರಿನ ರಿಮ್ಸ್​ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮೂರು ದಿನದ ಗಂಡು ಮಗೂನೇ ನಾಪತ್ತೆಯಾಗಿದೆ. ಕಂದಮ್ಮನನ್ನು ಮುದ್ದಾಡುವ ಮುನ್ನ ಕಳೆದುಕೊಂಡ ಹೆತ್ತ ತಾಯಿ ಕಣ್ಣೀರಿಡುತ್ತಿದ್ದಾರೆ. ಕೋಟಿ ಕೋಟಿ ವೆಚ್ಚ ಮಾಡಿ ಅಳವಡಿಸಿದ ಸಿಸಿಟಿವಿಗಳು ಕೆಲಸ ಮಾಡದೇ ಇರುವುದರಿಂದ ಐಸಿಯುನಲ್ಲಿದ್ದ ಮಗು ಏನಾಯಿತು ಎನ್ನುವುದು ತಿಳಿಯದಾಗಿದೆ.

Male Baby Is Missing From RIMS Hospital

ರಾಯಚೂರು(ಮಾ.30): ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೇ ಕಂದಮ್ಮಗಳ ಕಳ್ಳತನ ಜಾಸ್ತಿಯಾಗುತ್ತಿದೆ. ಇದೀಗ ರಾಯಚೂರಿನ ರಿಮ್ಸ್​ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮೂರು ದಿನದ ಗಂಡು ಮಗೂನೇ ನಾಪತ್ತೆಯಾಗಿದೆ. ಕಂದಮ್ಮನನ್ನು ಮುದ್ದಾಡುವ ಮುನ್ನ ಕಳೆದುಕೊಂಡ ಹೆತ್ತ ತಾಯಿ ಕಣ್ಣೀರಿಡುತ್ತಿದ್ದಾರೆ. ಕೋಟಿ ಕೋಟಿ ವೆಚ್ಚ ಮಾಡಿ ಅಳವಡಿಸಿದ ಸಿಸಿಟಿವಿಗಳು ಕೆಲಸ ಮಾಡದೇ ಇರುವುದರಿಂದ ಐಸಿಯುನಲ್ಲಿದ್ದ ಮಗು ಏನಾಯಿತು ಎನ್ನುವುದು ತಿಳಿಯದಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗದ ಮಲ್ಲಾಪುರ ಗ್ರಾಮದ ಯಲ್ಲಮ್ಮ ಎಂಬಾಕೆ ತನ್ನ ಮಗುವನ್ನು ಕಳೆದುಕೊಂಡ ತಾಯಿ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಯಲ್ಲಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ಜಾಂಡೀಸ್, ಉಸಿರಾಟ ಸಮಸ್ಯೆಯಿದೆ ಎಂದು ಹೆರಿಗೆಯಾದ ಒಂದೆರಡು ಗಂಟೆಗಳಲ್ಲಿಯೇ ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಯಲ್ಲಮ್ಮ ಆಗಾಗ ಮಗುವಿಗೆ ಹಾಲು ಕುಡಿಸಿ ಬರುತ್ತಿದ್ದರು. ಮಂಗಳವಾರ ಬೆಳಗ್ಗೆ ಕೂಡ ಮಗುವಿಗೆ ಹಾಲು ನೀಡಿ ಯಲ್ಲಮ್ಮ ಸಿಬ್ಬಂದಿಗೆ ಮಗು ವಾಪಸ್ ನೀಡಿ ಬಂದಿದ್ದಾಳೆ. ಆದ್ರೆ, ಮಧ್ಯಾಹ್ನ ಮತ್ತೆ ಹಾಲುಣಿಸಲು  ಹೋದರೆ ಮಗುವೇ ಇಲ್ಲವಂತೆ.

ಪ್ರತಿ ಬಾರಿ ಹಾಲುಣಿಸಲು ಮಗು ಪಡೆಯುವಾಗ, ನೀಡುವಾಗ ಸಿಬ್ಬಂದಿ ಪೋಷಕರಿಂದ ಸಹಿ ಪಡೆಯುತ್ತಿದ್ದರು. ಆದರೆ ಮಂಗಳವಾರ ಬೆಳಗ್ಗೆ ಮಗು ಪಡೆದಾಗ ಸಹಿ ಹಾಕಿದ್ದಾರೆ. ವಾಪಾಸ್ ಕೊಡುವಾಗ ಸಹಿ ಹಾಕಿಲ್ಲ ಇದನ್ನೇ ಆಧಾರವಾಗಿಟ್ಟುಕೊಂಡು ಸಿಬ್ಬಂದಿ  ಪೋಷಕರಿಗೇ ಮಗು ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಪೋಷಕರು ನಾವು ಮಗು ವಾಪಸ್ ನೀಡಿದ್ದೇವೆ ಎನ್ನುತ್ತಿದ್ದಾರೆ.

ಎಲ್ಲಾ ಕಡೆ ಸಿಸಿಟಿವಿ ಕೆಲಸ ಮಾಡುತ್ತಿದ್ದರೂ ಐಸಿಯುನಲ್ಲಿದ್ದ ಸಿಸಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಸಿಬ್ಬಂದಿ ಪ್ಲಾನ್ ಮಾಡಿಕೊಂಡೇ ಮಗು ಅಪಹರಿಸಿ ಮಾರಿದ್ದಾರೆ ಎನ್ನುವುದು ಪೋಷಕರ ಆರೋಪ. ಆದರೆ ವೈದ್ಯರು ಇದನ್ನು ನಿರಾಕರಿಸುತ್ತಾರೆ.

ಈ ವಾದ-ಪ್ರತಿವಾದದ ಮಧ್ಯೆ ಆಸ್ಪತ್ರೆ ಸಿಬ್ಬಂದಿ ಯಲ್ಲಮ್ಮಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ, ವಾರ್ಡಿಂದ ಹೊರಹಾಕಿದ್ದಾರೆ. ಮಗು ಕಳೆದುಕೊಂಡ ತಾಯಿ ಈಗ ರಾಯಚೂರಿನ ಮಾರ್ಕೆಟ್ ಯಾರ್ಡ್​  ಠಾಣೆ ಮೆಟ್ಟಿಲೇರಿದ್ದಾರೆ.

 

 

 

Follow Us:
Download App:
  • android
  • ios