ತೂತ್ತುಕುಡಿ [ಆ.02]: ಮಾಲ್ಡೀವ್ಸ್ ದೇಶದ ಮಾಜಿ ಅಧ್ಯಕ್ಷ ಅಹಮದ್‌ ಅದೀಬ್‌ ಅದ್ಬುಲ್‌ ಗಫರ್‌ ಅವರು ಗುರು​ವಾರ ಸಮುದ್ರ ಮಾರ್ಗ​ವಾಗಿ ಬೋಟ್‌ ಮೂಲಕ ತಮಿಳುನಾಡಿನ ತೂತ್ತುಕುಡಿಗೆ ಆಗಮಿಸಿದ್ದಾರೆ. 

ಯಾವುದೇ ಪೂರ್ವ ಮಾಹಿತಿ ನೀಡದೇ, ನೆರೆ ದೇಶದ ಮಾಜಿ ಅಧ್ಯಕ್ಷರು ಹೀಗೆ ಏಕಾಏಕಿ ಬಂದ ಹಿನ್ನೆಲೆಯಲ್ಲಿ, ಕೇಂದ್ರೀಯ ತನಿಖಾ ಸಂಸ್ಥೆಗಳು ಗಫರ್‌ ಅವರನ್ನು ವಿಚಾರಣೆಗೆ ಗುರಿಪಡಿಸಿವೆ. ಬೇರೆ ದೇಶ​ಗಳ ಗಣ್ಯರು ಭಾರ​ತಕ್ಕೆ ಬರು​ವು​ದಾ​ದರೆ ಪೂರ್ವ ಮಾಹಿತಿ ನೀಡ​ಬೇಕು ಹಾಗೂ ಅವರ ಆಗ​ಮ​ನಕ್ಕೆ ತಕ್ಕಂತೆ ಸ್ವಾಗತ ಕೈಗೊ​ಳ್ಳ​ಲಾ​ಗು​ತ್ತದೆ. 

ಆದರೆ ಸಮು​ದ್ರ​ಮಾ​ರ್ಗ​ದಲ್ಲಿ ದಿಢೀರ್‌ ಆಗ​ಮಿ​ಸಿ​ದ ಹಿನ್ನೆಲೆಯಲ್ಲಿ ಬೋಟ್‌ನಲ್ಲೇ ಅದೀಬ್‌ರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ.