ನಕಲಿ ನೋಟು ತಯಾರಿಕಾ ದಂಧೆ : ನಟಿ, ಕುಟುಂಬಸ್ಥರ ಬಂಧನ

Malayalam TV actress Surya Sasikumar, her mother and sister held in fake currency case
Highlights

ಪ್ರಸಿದ್ಧ ನಟಿ ಹಾಗೂ ಕುಟುಂಬಸ್ಥರನ್ನು ನಕಲಿ ನೋಟು ತಯಾರಿಕಾ ದಂಧೆಯಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. ಈ ವೇಳೆ ಅವರ ಮನೆಯಲ್ಲಿ ಇದ್ದ ಲಕ್ಷಾಂತರ ರು. ಮೌಲ್ಯದ  ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಕೊಚ್ಚಿ :  ಮಲಯಾಳಂ ಪ್ರಸಿದ್ಧ ಕಿರುತೆರೆ ನಟಿ  ಕುಟುಂಬವೊಂದು ನಕಲಿ ನೋಟು ದಂಧೆಯಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. 

ನಟಿ ನಿವಾಸದ ಮೇಲೆ ದಾಳಿ ಮಾಡಿದ್ದು, ಈ ವೇಳೆ ಒಟ್ಟು  57 ಲಕ್ಷ ರು.ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದೆ.  ಈ ಸಂಬಂಧ ನಟಿ ಸೂರ್ಯ ಸಸಿಕುಮಾರ್  ಹಾಗೂ ಸಹೋದರಿ ಶೃತಿ ತಾಯಿ  ರಿಮಾ ದೇವಿಯನ್ನು ಪೊಲೀಸರು ಮಂಗಳವಾರ ಬಂಧನಕ್ಕೆ ಒಳಪಡಿಸಿದ್ದಾರೆ. 

ಕೊಚ್ಚಿಯ ಇಡುಕ್ಕಿ ಪೊಲೀಸರು ಮೂವರನ್ನು ಬಂಧಿಸಿದ್ದು, ನಟಿಯ ತಾಯಿಯೇ ಈ ದಂಧೆಯಲ್ಲಿ ಮುಖ್ಯ ಕಿಂಗ್ ಪಿನ್ ಎನ್ನಲಾಗಿದೆ. 

ಅತ್ಯಧಿಕ ಪ್ರಮಾಣದಲ್ಲಿ ಇವರು ನಕಲಿ ನೋಟುಗಳನ್ನು ಮುದ್ರಣ ಮಾಡುತ್ತಿದ್ದರು. ಈ ದಂಧೆಯಲ್ಲಿ ಬರುತ್ತಿದ್ದ ಅರ್ಧಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಆದಾಯ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ದಾಳಿ ವೇಳೆ ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

loader