ಮೊದಲು 'ಹಾಯ್ ಟ್ವಿಟರ್' ಎಂದು ಟ್ವೀಟಿಸಿದ್ದರೆ ತದನಂತರ 'ಇದು ನನ್ನ ಶಾಳೆಯ ಕೊನೆ ದಿನ ಹಾಗೂ ಟ್ವಿಟರ್ ಖಾತೆಯ ಆರಂಭದ ದಿನ' ಎಂದು ಟ್ವೀಟ್ ಮಾಡಿದ್ದಾರೆ. ನಾಲ್ಕೂವರೆ ಲಕ್ಷ ಮಂದಿ ಫಾಲೋವರ್ಸ್ ಆಗಿದ್ದರೂ ಈಕೆ ಫಾಲೋ ಮಾಡಿರುವುದು ಒಬ್ಬರನ್ನು ಅದು 'ತನ್ನ ಹೆಸರಿನಲ್ಲಿರುವ 'ಮಲಾಲಾ ಫಂಡ್' ಸಂಸ್ಥೆ.

ಮಾನವ ಹಕ್ಕುಗಳ ಹೋರಾಟಗಾರ್ತಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ 'ಮಲಾಲಾ ಯುಸಾಫ್ ಜಾಯ್' ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ಟ್ವಿಟರ್'ನಲ್ಲಿ ತಮ್ಮ ಖಾತೆ ತೆರೆದ ಕೇವಲ 22 ಗಂಟೆಗಳಲ್ಲಿ 4,51 ಲಕ್ಷ ಮಂದಿ ಈಕೆಯ ಫಾಲೋವರ್ಸ್ ಆಗಿದ್ದಾರೆ.

ಮೊದಲು 'ಹಾಯ್ ಟ್ವಿಟರ್' ಎಂದು ಟ್ವೀಟಿಸಿದ್ದರೆ ತದನಂತರ 'ಇದು ನನ್ನ ಶಾಳೆಯ ಕೊನೆ ದಿನ ಹಾಗೂ ಟ್ವಿಟರ್ ಖಾತೆಯ ಆರಂಭದ ದಿನ' ಎಂದು ಟ್ವೀಟ್ ಮಾಡಿದ್ದಾರೆ. ನಾಲ್ಕೂವರೆ ಲಕ್ಷ ಮಂದಿ ಫಾಲೋವರ್ಸ್ ಆಗಿದ್ದರೂ ಈಕೆ ಫಾಲೋ ಮಾಡಿರುವುದು ಒಬ್ಬರನ್ನು ಅದು 'ತನ್ನ ಹೆಸರಿನಲ್ಲಿರುವ 'ಮಲಾಲಾ ಫಂಡ್' ಸಂಸ್ಥೆ.

19 ವರ್ಷದ ಮಲಾಲಾಳ ಎರಡೂ ಶಬ್ದಗಳ ಟ್ವೀಟಿಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡಿಯು ಸೇರಿದಂತೆ ವಿಶ್ವದ ದಿಗ್ಗಜರೆಲ್ಲರೂ ಮರು ಟ್ವೀಟಿಸಿ ಶುಭಾಶಯ ಕೋರಿದ್ದಾರೆ.

ಪಾಕಸಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ 14ನೇ ವಯಸ್ಸಿನಲ್ಲಿಯೇ ಹೋರಾಟ ಮಾಡಿದ್ದಕ್ಕಾಗಿ 2012ರಲ್ಲಿ ತಾಲಿಬಾನ್ ಉಗ್ರರು ಈಕೆಯ ಮೇಲೆ ದಾಳಿ ನಡೆಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ಮಲಾಲಾಳ ಹೋರಾಟದ ಮನೋಭಾವನೆ ವಿಶ್ವ ಪ್ರಸಿದ್ಧಿಯನ್ನು ತಂದುಕೊಟ್ಟಿರುವುದರ ಜೊತೆ 2014ರಲ್ಲಿಯೇ ಭಾರತದ ಕೈಲಾಶ್ ಸತ್ಯಾರ್ಥಿ ಅವರ ಜೊತೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಳು.