ರಾಂಪುರ, ಉತ್ತರ ಪ್ರದೇಶ (ಅ.06): ಭಾರತೀಯ ಸೇನೆಯು ನಡೆಸಿರುವ ಸರ್ಜಿಕಲ್ ದಾಳಿಯ ವಿಡಿಯೋವನ್ನು ಬಹಿರಂಗಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬುದ್ದಿವಂತಿಕೆಯ ಲಕ್ಷಣವಲ್ಲ ಎಂದು ಸಮಾಜವಾದಿ ಪಕ್ಷ ನಾಯಕ ಆಝಂ ಖಾನ್ ಹೇಳಿದ್ದಾರೆ.

ಸೇನೆಯು ನಡೆಸಿರುವ ಸರ್ಜಿಕಲ್ ದಾಳಿಯ ವಿಡಿಯೋವನ್ನು ಬಹಿರಂಗಪಡಿಸುವುದು ವಿವೇಕಪೂರ್ಣ ಕ್ರಮವಲ್ಲ.  ಹಿಂದೆಯೂ ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿತ್ತು, ಆದರೆ ಅವುಗಳ ವಿಡಿಯೋಗಳನ್ನು ಯಾವತ್ತೂ ಬಹಿರಂಗಪಡಿಸಲಾಗಿಲ್ಲ. ಅಂತಹ ದಾಳಿಗಳನ್ನು ಹೆಚ್ಚು ಪ್ರಚಾರ ಮಾಡಬಾರದು, ಎಂದು ಖಾನ್ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಸರ್ಜಿಕಲ್ ದಾಳಿಯ ವಿಡಿಯೋವನ್ನು ಸೇನೆಯು ನಿನ್ನೆ ಸರ್ಕಾರಕ್ಕೆ ಹಸ್ತಾಂತರಿಸಿದೆ.

ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಕ್ಕೆ ಎನ್’ಸಿಪಿಯು ಕೂಡಾ ವಿರೋಧ ವ್ಯಕ್ತಪಡಿಸಿದೆ.