Asianet Suvarna News Asianet Suvarna News

ಯೋಗಿ ಆದಿತ್ಯನಾಥ್ ಸಿಂಗ್ ಅಯೋಗ್ಯ: ತೇಜಸ್ವಿ ಯಾದವ್

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಸಿಂಗ್ ರನ್ನು ನೇಮಕ ಮಾಡಿರುವ ಬಿಜೆಪಿ ನಿರ್ಧಾರವನ್ನು ಅತೀ ದೊಡ್ಡ ಪ್ರಮಾದವೆಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಆದಿತ್ಯನಾಥ್ ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿಯಲ್ಲ ಎಂದಿದ್ದಾರೆ.

making Ayogya Yogi UP CM is BJP Biggest Mistake says Tejaswi Yadav

ನವದೆಹಲಿ (ಮಾ.18): ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಸಿಂಗ್ ರನ್ನು ನೇಮಕ ಮಾಡಿರುವ ಬಿಜೆಪಿ ನಿರ್ಧಾರವನ್ನು ಅತೀ ದೊಡ್ಡ ಪ್ರಮಾದವೆಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಆದಿತ್ಯನಾಥ್ ಮುಖ್ಯಮಂತ್ರಿ ಹುದ್ದೆಗೆ ಅರ್ಹ ವ್ಯಕ್ತಿಯಲ್ಲ ಎಂದಿದ್ದಾರೆ.

ಬಿಜೆಪಿ ಪಕ್ಷದ ಸದಸ್ಯರ ನಡುವೆ ಗುಂಪುಗಾರಿಕೆಯಿಂದ ಆಂತರಿಕ ಕಲವಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್, ಯೋಗಿ ಆದಿತ್ಯನಾಥ್ ತಮ್ಮ ಫೈರ್ ಭ್ರಾಂಡ್ ನಿಂದ ಹೊರಬಂದು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದಿದ್ದಾರೆ.

ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದು ಸರಿಯಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಯೋಗಿ ಆದಿತ್ಯನಾಥ್ ಮೂಲಕ ಕೋಮುವಾದವನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ನಾವು ಪ್ರತಿಭಟಿಸುತ್ತೇವೆ. 2019 ರ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಮತಗಳನ್ನು ಧೃವೀಕರಣ ಮಾಡಲು ಪ್ರಯತ್ನಿಸಿದರೆ ನಾವು ಅದನ್ನು ಯಶಸ್ವಿಯಾಗಲು ಬಿಡುವುದಿಲ್ಲ. ುತ್ತರ ಪ್ರದೇಶದ ಸೌಹಾರ್ದಯುತ ವಾತಾವರಣವನ್ನು ಕೆಡವಲು ಬಿಡದಿರುವುದೇ ನಮ್ಮ ುದ್ದೇಶ ಎಂದು ಅಗರ್ವಾಲ್ ಹೇಳಿದ್ದಾರೆ.

Follow Us:
Download App:
  • android
  • ios