ನಾನೊಬ್ಬ ಪ್ರಧಾನಿ ಮೊದಿಯ ಕಟ್ಟಾ ಬೆಂಬಲಿಗ ಹಾಗೂ ಸಸ್ಯಹಾರಿ. ಆದರೆ ಆಹಾರದ ಸ್ವಾತಂತ್ರ್ಯವನ್ನು ಕಾಪಾಡಲು ನಾನೀಗ ಗೋಮಾಂಸ ಸೇವಿಸಲಿದ್ದೇನೆ ಎಂದು ಜನಪ್ರಿಯ ಪ್ರಯಾಣ ಆ್ಯಪ್‌ ಮೇಕ್ ಮೈ ಟ್ರಿಪ್’ನ ಸಹಸಂಸ್ಥಾಪಕ ಕೇಯುರ್ ಜೋಷಿ ಟ್ವೀಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿದೆ.
ಗೋಹತ್ಯೆ ತಡೆಯಲು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗರೇ ವಿರೋಧ ಮಾಡಿ ಟ್ವಿಟರ್’ನಲ್ಲಿ ವಿವಾದ ಸೃಷ್ಟಿಸಿದ್ದಾರೆ.
ನಾನೊಬ್ಬ ಪ್ರಧಾನಿ ಮೊದಿಯ ಕಟ್ಟಾ ಬೆಂಬಲಿಗ ಹಾಗೂ ಸಸ್ಯಹಾರಿ. ಆದರೆ ಆಹಾರದ ಸ್ವಾತಂತ್ರ್ಯವನ್ನು ಕಾಪಾಡಲು ನಾನೀಗ ಗೋಮಾಂಸ ಸೇವಿಸಲಿದ್ದೇನೆ ಎಂದು ಜನಪ್ರಿಯ ಪ್ರಯಾಣ ಆ್ಯಪ್ ಮೇಕ್ ಮೈ ಟ್ರಿಪ್’ನ ಸಹಸಂಸ್ಥಾಪಕ ಕೇಯುರ್ ಜೋಷಿ ಟ್ವೀಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿದೆ.

ಮುಂದುವರಿದು, ಹಿಂದೂ ಧರ್ಮವು ಆಹಾರದ ಆಯ್ಕೆಯನ್ನು ಕಿತ್ತುಕೊಳ್ಳುತ್ತದೆಯೆಂದಾದಲ್ಲಿ, ನಾನು ಹಿಂದೂ ಅಲ್ಲವೆಂದು ಜೋಷಿ ಹೇಳಿದ್ದಾರೆ. ಜನರು ಏನನ್ನು ತಿನ್ನಬೇಕೆಂದು ನರೇಂದ್ರ ಮೋದಿ ಹಾಗೂ ಬಿಜೆಪಿ ನಿರ್ಧರಿಸುವಂತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್’ನಲ್ಲಿ ಜೋಷಿ ಗೋಹತ್ಯೆಯನ್ನು ವಿರೋಧಿಸುವವರ ಕೆಂಗಣ್ಣಿಗೆ ಬಲಿಯಾಗಿದ್ದಾರೆ. ಪ್ರತಿಭಟನೆಯ ರೂಪದಲ್ಲಿ ಮೇಕ್ ಮೈ ಟ್ರಿಪ್ ಆ್ಯಪ್'ನ್ನು ಅಳಿಸಿಹಾಕುವ ಅಭಿಯಾನ ಆರಂಭಿಸಿದ್ದಾರೆ.
ಅದಕ್ಕೆ ಸ್ಪಷ್ಟೀಕರಣ ನೀಡಿರುವ ಮೇಕ್ ಮೈ ಟ್ರಿಪ್ ಸಂಸ್ಥೆಯು ಅದು ಜೋಷಿ ಅವರದ್ದು ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದೆ.
