Asianet Suvarna News Asianet Suvarna News

ಭಾರತದ ಯಾವ ನಗರಗಳ ಮೇಲೆ ಬಿದ್ದಿದೆ ಅಲ್'ಖೈದಾ ಕಣ್ಣು ..?

ಅಲ್ ಖೈದಾ ಸಂಘಟನೆಯು ಇದೀಗ ಹೊಸ ವಿಡಿಯೋ ಒಂದನ್ನು  ಬಿಡುಗಡೆ ಮಾಡಿದ್ದು, ಅದರಲ್ಲಿ ಆಘಾತಕಾರಿ ವಿಚಾರಗಳನ್ನು ತಿಳಿಸಿದೆ.

Make Kolkata and Delhi war zone to rescue Kashmir says Al Qaeda

ನವದೆಹಲಿ (ಡಿ.27): ಅಲ್ ಖೈದಾ ಸಂಘಟನೆಯು ಇದೀಗ ಹೊಸ ವಿಡಿಯೋ ಒಂದನ್ನು  ಬಿಡುಗಡೆ ಮಾಡಿದ್ದು, ಅದರಲ್ಲಿ ಆಘಾತಕಾರಿ ವಿಚಾರಗಳನ್ನು ತಿಳಿಸಿದೆ.

ಇದೀಗ ಭಾರತೀಯ ಮೆಟ್ರೋ ಸಿಟಿಗಳ ಮೇಲೆ ಈ ಉಗ್ರ ಸಂಘಟನೆಯ ಕಣ್ಣು ಬಿದ್ದಿದೆ.  ಅಲ್ಲದೇ ತಾವು ಬೆಂಗಳೂರು, ಕೋಲ್ಕತಾ ಹಾಗೂ ದಿಲ್ಲಿಯ ಮೇಲೆ ದಾಳಿ ಮಾಡಿದಾಗ ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ.

ಆಗ ಕಾಶ್ಮೀರದಲ್ಲಿ ಭದ್ರತೆ ದುರ್ಬಲವಾಗುತ್ತದೆ. ಆಗ ಅದನ್ನು ವಶಕ್ಕೆ ಪಡೆದುಕೊಳ್ಳುವು ಹೆಚ್ಚು ಸುಲಭವಾಗಲಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.

ಕಳೆದ ಒಂದು ದಿನದ ಹಿಂದೆ ಉಗ್ರ ಸಂಘಟನೆಯ ಮುಖಂಡನೋರ್ವ ವಿಡಿಯೋದಲ್ಲಿ ಈ ವಿಚಾರವನ್ನು ಹೇಳಿರುವುದು ಇದೀಗ ಬೆಳಕಿಗೆ ಬಂದಿದೆ.

Follow Us:
Download App:
  • android
  • ios