ಈ ವರ್ಷದ  ಮಾರ್ಚ್'ನಲ್ಲಿ ಶ್ರೀನಗರದ ಹೋಟೆಲ್ ಒಂದರಲ್ಲಿ ಮೇಜರ್ ಲೀಟುಲ್ ಗೊಗೋಯ್ ಮಹಿಳೆಯೊಬ್ಬರ ಜೊತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ  ಅವರನ್ನು ಬಂಧಿಸಲಾಗಿತ್ತು.

ನವದೆಹಲಿ[ಆ.27]: ಭಾರತೀಯ ಸೇನಾ ಕೋರ್ಟ್ ಮೇಜರ್ ಲೀಟುಲ್ ಗೊಗೋಯ್ ಅವರನ್ನು ಶ್ರೀನಗರ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ
ಎಂದು ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವರ್ಷದ ಮಾರ್ಚ್'ನಲ್ಲಿ ಶ್ರೀನಗರದ ಹೋಟೆಲ್ ಒಂದರಲ್ಲಿ ಮೇಜರ್ ಲೀಟುಲ್ ಗೊಗೋಯ್ ಮಹಿಳೆಯೊಬ್ಬರ ಜೊತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಲೀಟುಲ್ ಅವರು ಸೇನಾ ನಿಯಮಗಳನ್ನು ಉಲ್ಲಂಘಿಸಿರುವುದು ಕೋರ್ಟ್'ಗೆ ತಿಳಿದ ಹಿನ್ನಲೆಯಲ್ಲಿ ಕಠಿಣ ಕ್ರಮ ಜರುಗಿಸುವ ಸಾಧ್ಯತೆಯಿದೆ. 

ಸ್ಥಳೀಯ ಮಹಿಳೆಯೊಂದಿಗೆ ಸಂಪರ್ಕ ಬೆಳೆಸುತ್ತಿರುವುದು ಸೇನಾ ನೀತಿ ನಿಯಮಗಳಿಗೆ ವಿರುದ್ಧವಾಗಿದ್ದು, ಅಲ್ಲದೆ ಕರ್ತವ್ಯ ನಿರತ ಪ್ರದೇಶದಿಂದ ದೂರ ತೆರಳಿದ್ದು ಕೂಡ ತಪ್ಪು ಎಂದು ಕೋರ್ಟ್ ತಿಳಿಸಿದೆ. ಕರ್ತವ್ಯನಿರತವಿರುವಾಗಲೇ ಲೀಟುಲ್ ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು. ಮಹಿಳೆಯೊಬ್ಬರ ಜೊತೆ ಮಾರ್ಚ್ ತಿಂಗಳಲ್ಲಿ ಮೇಜರ್ ಹೋಟೆಲ್ ಪ್ರವೇಶಿಸಲು ಯತ್ನಿಸಿದಾಗ ಅವರನ್ನು ಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗಿತ್ತು. 

ಕಳೆದ ವರ್ಷದ ಏಪ್ರಿಲ್‌ನಲ್ಲಿ ಕಾಶ್ಮೀರದ ಬುಡಗಾವ್'ನಲ್ಲಿ ವ್ಯಕ್ತಿಯೊಬ್ಬನನ್ನು ಜೀಪಿನಲ್ಲಿ ಮಾನವ ಗುರಾಣಿಯನ್ನಾಗಿ ಬಳಸಿಕೊಂಡು ವಿವಿಧ ಹಳ್ಳಿಗಳಲ್ಲಿ ಸುತ್ತಾಡಿಸಿ ದೇಶಾದ್ಯಂತ ಸುದ್ದಿಯಾಗಿದ್ದರು.