ದೆಹಲಿಯಲ್ಲಿ ಹಂಡಾಗೆ ಅದೆಷ್ಟು ಗೆಳತಿಯರು?: ಶಾಕಿಂಗ್ ನಂಬರ್

First Published 27, Jun 2018, 7:59 PM IST
Major Handa called a 'girlfriend' and told her about killing Shailza: Police
Highlights

ಶೈಲಜಾ ಕೊಂದ ಪಾಪಿ ಮೇಜರ್ ಮಾಡಿದ್ದೇನು ಗೊತ್ತಾ?

ಗರ್ಲಫ್ರೆಂಡ್ ಗೆ ಫೋನ್ ಮಾಡಿ ಕೃತ್ಯ ತಿಳಿಸಿದ ಹಂಡಾ

ದೆಹಲಿಯಲ್ಲಿ ಹಂಡಾಗೆ ಎಷ್ಟು ಗರ್ಲಫ್ರೆಂಡ್ಸ್?

ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಹಂಡಾ ಕೃತ್ಯ 

ನವದೆಹಲಿ(ಜೂ.27): ತನ್ನ ಸಹೋದ್ಯೋಗಿ ಹೆಂಡತಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಸೇನಾಧಿಕಾರಿ ಮೇಜರ್ ನಿಖಿಲ್ ಹಂಡಾ, ಕೊಲೆ ಬಳಿಕ ಮಾಡಿದ ಕೆಲಸವೇನು ಗೊತ್ತಾ?. ಸಹೋದ್ಯೋಗಿ ಪತ್ನಿ ಶೈಲಜಾ ದ್ವಿವೇದಿ ಅವರನ್ನು ಕೊಲೆ ಮಾಡಿದ್ದ ಮೇಜರ್ ನಿಖಿಲ್ ಹಂಡಾ, ಬಳಿಕ ಮತ್ತೋರ್ವ ಗೆಳತಿಗೆ ಫೋನ್ ಮಾಡಿ ತಾನು ಶೈಲಜಾಳನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ಪೊಲೀಸರ ವಿಚಾರಣೆ ಸಮಯದಲ್ಲಿ ಈ ವಿಷಯ ಬಾಯ್ಬಿಟ್ಟಿರುವ ನಿಖಿಲ್ ಹಂಡಾ, ತನಗೆ ದೆಹಲಿಯಲ್ಲಿ ಇನ್ನೂ ಮೂವರು ಗರ್ಲಫ್ರೆಂಡ್ಸ್ ಇರುವುದಾಗಿ ತಿಳಿಸಿದ್ದಾನೆ.

ನಿಖೀಲ್ ಹಂಡಾ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿರುವ ಪೊಲೀಸರು, ಆತ ಮಾಡಿರುವ ಕರೆಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಆತನ ಪ್ರಿಯತಮೆಯ ನಂಬರ್ ಪತ್ತೆಯಾಗಿದ್ದು, ಆಕೆಗೆ ಶೈಲಜಾ ಕೊಲೆ ವಿಚಾರವನ್ನು ನಿಖಿಲ್ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಮೊದಲೂ ಕೂಡ ನಿಖಿಲ್ ಇದೇ ಮಹಿಳೆಗೆ ಫೋನ್ ಮಾಡಿ ಶೈಲಜಾಳನ್ನು ತಾನು ಕೊಲ್ಲುವುದಾಗಿ ತಿಳಿಸಿದ್ದ. ಆದರೆ ಈತನ ಮಾತನ್ನು ಗಂಭೀರವಾಗಿ ಪರಿಗಣಿಸದ ಆಕೆ, ಫೋನ್ ನ್ನು ಕಟ್ ಮಾಡಿದ್ದಳು. ಆದರೆ ಕೊಲೆ ಬಳಿಕ ನಿಖಿಲ್ ಕರೆ ಮಾಡಿದಾಗ ಆಕೆಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.

loader