ಬೆಂಗಳೂರು (ಡಿ.01): ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಕುಮಾರ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿತು.

ಬೆಳಗ್ಗೆ  ಅಕ್ಷಯ್ ಕುಮಾರ್ ಪಾರ್ಥಿವ್ ಶರೀರವನ್ನು . ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ತರಲಾಯ್ತು.  ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯ್ತು.

ಅಲ್ಲಿಂದ ಮೆರವಣಿಗೆಯಲ್ಲಿ ಯಲಹಂಕದ ಅಕ್ಷಯ್​ ಕುಮಾರ್​ ಅವರ ಅಪಾರ್ಟ್‍ಮೆಂಟ್​​ಗೆ ತರಲಾಯ್ತು. ಅಲ್ಲಿ ಸಂಜೆ ಯಲಹಂಕದ ಜೇಡ್​ ಗಾರ್ಡನ್ ಗೇಟ್‍ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮೆರವಣಿಗೆ ಮೂಲಕ ಹೆಬ್ಬಾಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡು ಅಂತಿನ ನಮನ ಸಲ್ಲಿಸಿದರು.