ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಉನ್ನತ ಶಿಕ್ಷಣ ಯೋಜನೆಯಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ (BASE) ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಉಪನ್ಯಾಸದೊಂದಿಗೆ ಇದೇ ಆ.28ಕ್ಕೆ ಶುಭಾರಂಭಗೊಳ್ಳಲಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಉನ್ನತ ಶಿಕ್ಷಣ ಯೋಜನೆಯಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ (BASE) ಇದೇ ಆ.28ಕ್ಕೆ ಶುಭಾರಂಭಗೊಳ್ಳಲಿದೆ.
ಮಾಜಿ ಪ್ರಧಾನಿಯೂ, ಆರ್ಥಿಕ ತಜ್ಞರೂ ಆಗಿರುವ ಮನಮೋಹನ್ ಸಿಂಗ್ ಬೇಸ್’ನ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಮೊದಲ ಪಾಠ ಹೇಳಿಕೊಡಲಿದ್ದಾರೆ.
ಪ್ರತಿಷ್ಠಿತ ಶೈಕ್ಷಣಿಕ ಯೋಜನೆಯಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್’ಗೆ ಕಳೆದ ಏ.14ರಂದು ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಶಂಕು ಸ್ಥಾಪನೆಗೈದಿದ್ದರು.
