ನ.30 ರಂದು ಬೆಳಗ್ಗೆ 11ಗಂಟೆಗೆ ನಗರದ ನಾಟಕ ಶಿರೋಮಣಿ ಎ.ವಿ.ವರದಾಚಾರ್ ಸ್ಮಾರಕ ಕಲಾ ಸಂಘದ ಸಭಾಂಗಣದಲ್ಲಿ ಮಹಿಮಾ ಪಟೇಲ್ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ

ಬೆಂಗಳೂರು: ನಿತೀಶ್‌ಕುಮಾರ್ ಬಣದ ಜನತಾ ದಳ (ಸಂಯುಕ್ತ) ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಆಯ್ಕೆಯಾಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯುವ ಜನತಾದಳ (ಸಂಯುಕ್ತ) ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಶಿವರಾಮ್, ನ.30 ರಂದು ಬೆಳಗ್ಗೆ 11ಗಂಟೆಗೆ ನಗರದ ನಾಟಕ ಶಿರೋಮಣಿ ಎ.ವಿ.ವರದಾಚಾರ್ ಸ್ಮಾರಕ ಕಲಾ ಸಂಘದ ಸಭಾಂಗಣದಲ್ಲಿ ಮಹಿಮಾ ಪಟೇಲ್ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದರು.