ನವದೆಹಲಿ[ಜು.03]: ಇಸ್ರೇಲ್‌ ಮೂಲದ ಕಂಪನಿಯೊಂದು ರಾಷ್ಟ್ರಪಿತ ಮಹಾತ್ಮಗಾಂಧಿ ಚಿತ್ರವನ್ನು ಮದ್ಯದ ಬಾಟಲಿಗಳ ಮೇಲೆ ಬಳಸುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮಲ್ಕಾ ಬ್ರಿವೇರಿ ಮತ್ತು ನಿಗೇವ್‌ ಬಿಯರ್‌ ಎಂಬ ಕಂಪನಿಗಳು, ಇಸ್ರೇಲ್‌ನ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಿರುವ ಮದ್ಯದ ಬಾಟಲ್‌ ಮೇಲೆ ಗಾಂಧೀಜಿ ಅವರ ಚಿತ್ರಗಳನ್ನು ಬಳಸಿವೆ. ಮಂಗಳವಾರ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಆಮ್‌ಆದ್ಮಿ ಪಕ್ಷದ ಸದಸ್ಯ ಸಂಜಯ್‌ಸಿಂಗ್‌, ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.

ಈ ವೇಳೆ ಪೀಠದಲ್ಲಿ ಸಭಾಧ್ಯಕ್ಷ ವೆಂಕಯ್ಯನಾಯ್ಡು, ಈ ವಿಷಯದ ಬಗ್ಗೆ ಗಮನ ಹರಿಸುವಂತೆ ವಿದೇಶಾಂಗ ಖಾತೆ ಸಚಿವ ಎಸ್‌.ಜೈಶಂಕರ್‌ ಅವರಿಗೆ ಸೂಚಿಸಿದರು.