ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆ ಹಿಂದೆ ನಾಥೂರಾಂ ಗೋಡ್ಸೆ ಹೊರತಾಗಿ ಮತ್ತೊಬ್ಬ ವ್ಯಕ್ತಿ ಇದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ.
ನವದೆಹಲಿ(ಜ.9): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆ ಹಿಂದೆ ನಾಥೂರಾಂ ಗೋಡ್ಸೆ ಹೊರತಾಗಿ ಮತ್ತೊಬ್ಬ ವ್ಯಕ್ತಿ ಇದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಹೀಗಾಗಿ ಗಾಂಧಿ ಹತ್ಯೆ ಪ್ರಕರಣ ವನ್ನು ಮತ್ತೊಮ್ಮೆ ತನಿಖೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟಿಗೆ ನ್ಯಾಯಾಲಯದ ಸಲಹೆಗಾರ (ಅಮೀಕಸ್ ಕ್ಯೂರಿ) ಅಮರೇಂದ್ರ ಶರಣ್ ಸೋಮವಾರ ಸಲಹೆ ತಿಳಿಸಿದ್ದಾರೆ.
ಇದರಿಂದಾಗಿ, ‘ಗಾಂಧಿ ಹತ್ಯೆ ಹಿಂದೆ ನಿಗೂಢ ವ್ಯಕ್ತಿಯೊಬ್ಬರು ಇದ್ದರು, ಆ ಬಗ್ಗೆ ತನಿಖೆ ನಡೆಸಬೇಕು’ ಎಂಬ ಬೇಡಿಕೆ ಬಲ ಕಳೆದುಕೊಂಡಿದೆ. ಸಂಶೋಧಕ ಪಂಕಜ್ ಫಡ್ನಿಸ್ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
