Asianet Suvarna News Asianet Suvarna News

ಮಹದಾಯಿ ವಿಚಾರ: ಮಹಾ ಗೃಹ ಸಚಿವರ ಉದ್ಧಟತನದ ಹೇಳಿಕೆ

ಮಹದಾಯಿ ನೀರು ಹಂಚಿಕೆ  ವಿಚಾರವಾಗಿ  ಬೆಳಗಾವಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಉದ್ಧಟತನದ ಹೇಳಿಕೆ ನೀಡಿದ್ದಾರೆ.

Maharashtra Home Minister Statement on Mahadayi issue

ಬೆಳಗಾವಿ (ಫೆ.03): ಮಹದಾಯಿ ನೀರು ಹಂಚಿಕೆ  ವಿಚಾರವಾಗಿ  ಬೆಳಗಾವಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಗೋವಾಗೆ ಮಹಾರಾಷ್ಟ್ರದ ನೀರು ಹೋಗುತ್ತಿದೆ.  ಮಹದಾಯಿ ಇರೋದು ಖಾನಾಪುರದಲ್ಲಿ. ಮಹಾಜನ್ ವರದಿ ಪ್ರಕಾರ ಖಾನಾಪುರ ಮಹಾರಾಷ್ಟ್ರಕ್ಕೆ ಸೇರಿದೆ. ಕರ್ನಾಟಕ ಮಹಾಜನ್ ವರದಿ ಅಂಗೀಕರಿಸಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದೀಪಕ ಕೇಸರಕರ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ನಾವು ಮಹದಾಯಿ ವಿಚಾರದಲ್ಲಿ ಗೋವಾ ಬೇಡಿಕೆ ಆಲಿಸಬೇಕು. ಗೋವಾ ಚಿಕ್ಕ ರಾಜ್ಯವಿದೆ. ನಾವು ಕರ್ನಾಟಕ, ಮಹಾರಾಷ್ಟ್ರ ದೊಡ್ಡ ರಾಜ್ಯದವರು ಎಂದು ಪರೋಕ್ಷವಾಗಿ ಮಹಾ ಸಚಿವ ಗೋವಾ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಯಾವುದೇ ರಾಜೀಮಾಡಿಕೊಳ್ಳುವುದಿಲ್ಲ. ಗಡಿ ವಿವಾದ, ಮಹದಾಯಿ ವಿವಾದ ನ್ಯಾಯಾಧೀಕರಣದಲ್ಲಿದೆ. ಬೆಳಗಾವಿ ನಗರ ಸೇರಿ 856 ಗ್ರಾಮಗಳು ಮಹಾರಾಷ್ಟ್ರ ಸೇರಬೇಕು. ಇಲ್ಲಿ ಮರಾಠಿಗರು ಇದ್ದಾರೆ. ಕರ್ನಾಟಕ ಸರ್ಕಾರ ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆ ನೀಡುತ್ತಿಲ್ಲ ಎಂದು ದೀಪಕ್ ಕೇಸರಕರ ಹೇಳಿದ್ದಾರೆ.

Follow Us:
Download App:
  • android
  • ios