Asianet Suvarna News Asianet Suvarna News

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಮುಂದಾಗಿದೆ ಸರ್ಕಾರ

ಪೆಟ್ರೋಲ್, ಡೀಸೆಲ್ ದರ  ದಿನ ದಿನಕ್ಕೆ ಗಗನಕ್ಕೆ ಏರುತ್ತಿದೆ. ಗ್ರಾಹರಿಗೆ ದಿನವೂ ಕೂಡ ಬೆಲೆ ಶಾಕ್ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಬೆಲೆ ಇಳಿಸಲು ಮಹಾರಾಷ್ಟ್ರ ಸರ್ಕಾರ ವಿವಿಧ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದೆ. 

Maharashtra Govt Working To Reduce Fuel Prices
Author
Bengaluru, First Published Sep 9, 2018, 3:56 PM IST

ಮುಂಬೈ :  ದಿನ ದಿನಕ್ಕೆ ತೈಲ ದರ ಗಗನದತ್ತ ಮುಖ ಮಾಡುತ್ತಿದೆ. ಪ್ರತೀ ಲೀಟರ್ ಪೆಟ್ರೋಲ್ ದರ 80 ರು. ದಾಟಿ ಮುಂದೆ ಹೋಗಿದೆ. ಜನರಿಗೆ ಪೆಟ್ರೋಲ್ ದರ ಹೆದರಿಕೆಯನ್ನು ಹುಟ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. 

ಜನರಿಗೆ ಕೊಂಚ ನಿರಾಳರಾಗುವಂತಹ ಸುದ್ದಿಯೊಂದನ್ನು ನೀಡಿದ್ದು, ಪೆಟ್ರೋಲ್ ದರವನ್ನು ಇಳಿಕೆ ಮಾಡಲು ಹಲವು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹೇಳಿದ್ದಾರೆ. 

ಇನ್ನು ಪೆಟ್ರೋಲ್ ದರ ಇಳಿಕೆ ಮಾಡಲು ಜಿಎಸ್ ಟಿ ಅಡಿ ತರುವುದು ಕೂಡ ಒಂದು ನಿಯಂತ್ರಣ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ. 

ಈ ಬಗ್ಗೆ ವಿವಿಧ ರೀತಿಯ ಪ್ರಸ್ತಾವನೆಯನ್ನು ಮುಂದಿಡಲಾಗುತ್ತದೆ. ಪೆಟ್ರೋಲ್ , ಡೀಸೆಲ್ ಅನ್ನು ಜಿಎಸ್ ಟಿ ಅಡಿಯಲ್ಲಿ ತರಲು ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಲಿದೆ ಎಂದು  ಮುಖ್ಯಮಂತ್ರಿ ಫಡ್ನಾವಿಸ್ ಹೇಳಿದ್ದಾರೆ. 

Follow Us:
Download App:
  • android
  • ios