Asianet Suvarna News Asianet Suvarna News

100ಕ್ಕೂ ಹೆಚ್ಚು ಎನ್‌ಕೌಂಟರ್‌ ಖ್ಯಾತಿಯ ಶರ್ಮಾ ಶಿವಸೇನೆ ಅಭ್ಯರ್ಥಿ?

2008ರ ಲಖನ್‌ ಭಯ್ಯಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸೇವೆಯಿಂದ ಅಮಾನತ್ತಾಗಿದ್ದ ಪ್ರದೀಪ್‌ ಕುಮಾರ್‌| 100ಕ್ಕೂ ಹೆಚ್ಚು ಎನ್‌ಕೌಂಟರ್‌ ಖ್ಯಾತಿಯ ಶರ್ಮಾ ಶಿವಸೇನೆ ಅಭ್ಯರ್ಥಿ?

Maharashtra Govt Accepts Encounter Specialist Pradeep Sharma Resignation
Author
Bangalore, First Published Sep 10, 2019, 1:22 PM IST

ಮುಂಬೈ[ಸೆ.10]: ಹಿರಿಯ ಪೊಲೀಸ್‌ ಅಧಿಕಾರಿ ಹಾಗೂ ನೂರಕ್ಕೂ ಹೆಚ್ಚು ಎನ್‌ಕೌಂಟರ್‌ ಮಾಡಿ ಮುಂಬೈ ಭೂಗತ ಜಗತ್ತಿಗೆ ನಡುಕ ಹುಟ್ಟಿಸಿದ್ದ ಪ್ರದೀಪ್‌ ಶರ್ಮಾ ಪೊಲೀಸ್‌ ಸೇವೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಸರ್ಕಾರ ಕೂಡಾ ಅಂಗೀಕರಿಸಿದೆ.

ಶರ್ಮಾ, ಇದೇ ಅಕ್ಟೋಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. 2008ರ ಲಖನ್‌ ಭಯ್ಯಾ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸೇವೆಯಿಂದ ಅಮಾನತ್ತಾಗಿದ್ದ ಪ್ರದೀಪ್‌ ಕುಮಾರ್‌ 2013ರಲ್ಲಿ ಸೇವೆಗೆ ಮರಳಿದ್ದರು.

1983ರಲ್ಲಿ ಪೊಲೀಸ್‌ ಸೇವೆಗೆ ಸೇರಿದ್ದ ಪ್ರದೀಪ್‌ ಬಳಿಕ ಮುಂಬೈ ಕ್ರೈಂ ಬ್ರಾಂಚ್‌ಗೆ ವರ್ಗವಾಗಿದ್ದರು. ಮುಂಬೈ ಭೂಗತ ಜಗತ್ತನ್ನು ಮಟ್ಟಹಾಕುವ ನೇತೃತ್ವ ವಹಿಸಿದ್ದ ಶರ್ಮಾ, ದಾವೂದ್‌ ಸಹೋದರ ಇಕ್ಬಾಲ್‌ ಕಸ್ಕರ್‌ನನ್ನು ಸುಲಿಗೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು.

Follow Us:
Download App:
  • android
  • ios