ಮಲ್ಲೇಶ್ವರದ ಸರ್ಕಾರಿ ಕಾಲೇಜಿನ ಸ್ಕೌಟ್ಸ್, ಗೈಡ್ಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳಿಗೆ ಸೋನಿಯಾಗಾಂಧಿ ಅವರ ಆತ್ಮಕತೆ 'ಬಿಲಾಂಗಿಂಗ್' ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ಈ ಪುಸ್ತಕ ನೀಡಲಾಗಿದೆ.
ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ಆತ್ಮಕತೆ ಬಿಲಾಂಗಿಂಗ್ – ಎ ಜರ್ನಿ ಆಫ್ ಲವ್ ಪುಸ್ತಕವನ್ನು ಬೆಂಗಳೂರಿನ ಮಲ್ಲೇಶ್ವರ ಸರ್ಕಾರಿ ಕಾಲೇಜಿನ ಸ್ಕೌಟ್ಸ್, ಗೈಡ್ಸ್ ಹಾಗೂ ಎನ್ ಸಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಕಾಂಗ್ರೆಸ್ ನಾಯಕರು ಪುಸ್ತಕ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಟ್ರೆಂಡ್ಗೆ ಬದಲಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಹಂಚುತ್ತಿರುವುದು ವಿಶೇಷವಾಗಿದೆ.
100ಕ್ಕೂ ಹೆಚ್ಚು ಮಕ್ಕಳಿಗೆ ಪುಸ್ತಕ ವಿತರಣೆ
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ಈ ಪುಸ್ತಕ ವಿತರಿಸಲಾಯಿತು. ಸೋನಿಯಾ ಗಾಂಧಿ ಅವರ ತ್ಯಾಗ, ಸ್ವಾವಲಂಬಿ ಗುಣಗಳು ಎಲ್ಲರಿಗೂ ಆದರ್ಶವಾಗಲಿ. ಸಮರ್ಪಣೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ ಎಂಬ ಈ ಪುಸ್ತಕದಿಂದ ಮಕ್ಕಳಿಗೆ ಸಿಗಲಿ ಎಂಬ ಆಶಯದೊಂದಿಗೆ ಪುಸ್ತಕ ವಿತರಿಸುತ್ತಿರುವುದಾಗಿ ಅನೂಪ್ ಹೇಳಿದರು.

ಗುಣಮಟ್ಟದ ಈ ಪುಸ್ತಕವನ್ನು ಶಾಲಾ – ಕಾಲೇಜು ಮಕ್ಕಳು ಕೊಳ್ಳುವುದು ಕಷ್ಟ. ಎಲ್ಲರೂ ಪುಸ್ತಕ ಓದಲಿ ಎಂಬ ಸದಾಶಯದೊಂದಿಗೆ ನಮ್ಮ ಶಕ್ತಿ ಅನುಸಾರ ಉಚಿತವಾಗಿ ಈ ಪುಸ್ತಕ ವಿತರಿಸುತ್ತಿದ್ದೇವೆ. ಮಲ್ಲೇಶ್ವರ ಸರ್ಕಾರಿ ಕಾಲೇಜಿನ ಎಲ್ಲ ಮಕ್ಕಳಿಗೂ ಪುಸ್ತಕ ನೀಡುವ ಯೋಚನೆ ಇದೆ ಎಂದೂ ಅನೂಪ್ ಅಯ್ಯಂಗಾರ್ ತಿಳಿಸಿದ್ದಾರೆ.














