1970ರಲ್ಲಿ ಮೊದಲ ಬಾರಿಗೆ ತಿಮ್ಮಪ್ಪನ ಜನಪ್ರಿಯ ಚಿತ್ರ ರಚಿಸಿದ ಕಲಾವಿದ ಶ್ರೀನಿವಾಸನ್ ನಿಧನ
ಕೋಟ್ಯಂತರ ಭಕ್ತರ ಮನೆಯಲ್ಲಿ ಪೂಜೆಗೊಳ್ಳುವ ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಚಿತ್ರವನ್ನು ರಚಿಸಿದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ ನಿಧನರಾಗಿದ್ದಾರೆ. 1970ರ ದಶಕದಲ್ಲಿ ಗರ್ಭಗುಡಿಯಲ್ಲಿದ್ದ ಸ್ವಾಮಿಯನ್ನು ಕಣ್ಣಾರೆ ಕಂಡು ಅವರು ಈ ಅದ್ಭುತ ಕಲಾಕೃತಿಯನ್ನು ರಚಿಸಿದ್ದರು.

ತಿಮ್ಮಪ್ಪನ ಅದ್ಭುತ ಚಿತ್ರ ರಚಿಸಿದ ಆ ಕಲೆಗಾರನ ಬಗ್ಗೆ ನಿಮಗೆ ಗೊತ್ತೆ?
ಚೆನ್ನೈ: ಕೋಟ್ಯಂತರ ಭಕ್ತರ ಮನೆಯಲ್ಲಿ ನಿತ್ಯ ಪೂಜೆಗೊಳ್ಳುವ ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಭಾವಚಿತ್ರವನ್ನು ಬಿಡಿಸಿದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ (86) ಶನಿವಾರ ನಿಧನರಾಗಿದ್ದಾರೆ.
ಶ್ರೀನಿವಾಸನ್ ರಚಿಸಿದ ಚಿತ್ರಗಳಿಗೆ ಟಿಟಿಡಿ ಅನುಮೋದನೆ
ತಮಿಳುನಾಡಿನ ಕೋವಿಲ್ಪಟ್ಟಿ ಮೂಲದವರಾದ ಶ್ರೀನಿವಾಸನ್, 1970ರ ದಶಕದ ಆರಂಭದಲ್ಲಿ ತಿರುಮಲ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ರೂಪವನ್ನು ಕಣ್ಣಾರೆ ಕಂಡು ಆ ಚಿತ್ರವನ್ನು ರಚಿಸಿದ್ದರು. ಬಳಿಕ ಟಿಟಿಡಿಯಿಂದ ಅನುಮೋದನೆ ಪಡೆದ ಅವರ ಈ ಕಲಾಕೃತಿ ಕ್ಯಾಲೆಂಡರ್ ಮತ್ತು ಪೋಸ್ಟರ್ಗಳ ಮೂಲಕ ದೇಶ-ವಿದೇಶಗಳ ಕೋಟ್ಯಂತರ ಭಕ್ತರ ಮನೆಗಳನ್ನು ತಲುಪಿ ಅಪಾರ ಜನಪ್ರಿಯತೆ ಪಡೆದಿತ್ತು.
10ನೇ ತರಗತಿ ಓದಿದ್ದ ಶ್ರೀನಿವಾಸನ್
ತಮಿಳುನಾಡಿನ ಶ್ರೀನಿವಾಸನ್ ಅವರು 10ನೇ ತರಗತಿ ವರೆಗೂ ಶಿಕ್ಷಣ ಪಡೆದುಕೊಂಡಿದ್ದು, ಆ ಬಳಿಕ ಖ್ಯಾತ ಚಿತ್ರಕಾರರಾದ ಕೆಂಡಯ್ಯರಾಜು ಅವರ ಬಳಿ ಶಿಷ್ಯರಾಗಿ ಸೇರ್ಪಡೆಯಾಗಿದ್ದರು. ಅವರ ಬಳಿ ತರಬೇತಿ ಪಡೆದು, ದೇವರ ಚಿತ್ರಗಳನ್ನು ರಚಿಸುವುದರಲ್ಲಿ ಕೌಶಲ್ಯ ಪಡೆದುಕೊಂಡಿದ್ದರು.
ತಿಮ್ಮಪ್ಪನ ಎರಡು ಚಿತ್ರಗಳನ್ನು ರಚಿಸಿದ್ದ ಶ್ರೀನಿವಾಸನ್
ಇದರೊಂದಿಗೆ ಇವರನ್ನು 1970ರಲ್ಲಿ ಟಿಟಿಟಿ ಅವರಿಗೆ ವಿಶೇಷ ಆಹ್ವಾನ ನೀಡಿತ್ತು. ತಿರುಮಲ ಶ್ರೀವಾರಿ ಆಲಯ ಗರ್ಭಗುಡಿಯಲ್ಲಿರುವ ಶ್ರೀವೆಂಕಟೇಶ್ವರನ ನೇರವಾಗಿ ನೋಡಿ ಸ್ವಾಮಿಯ ರೂಪವನ್ನು ಅದ್ಬುತವಾಗಿ ರಚಿಸಿದ್ದರು. ಶ್ರೀನಿವಾಸನ್ ತಿರುಮಲ ಶ್ರೀವಾರು ಸರ್ವಾಭರಣದೊಂದಿಗೆ ಧರಿಸಿದ್ದ ಚಿತ್ರವನ್ನು ರಚಿಸಿದ್ದರು. ಮತ್ತೊಂದು ಸರ್ವಾಭರಣಗಳನ್ನು ಧರಿಸದೆ ಇರುವ ಎರಡು ಚಿತ್ರಗಳನ್ನು ಅದ್ಭುತವಾಗಿ ರಚಿಸಿದ್ದರು. ಈ ಚಿತ್ರಗಳಿಗೆ ಟಿಟಿಡಿ ಅಧಿಕೃತವಾಗಿ ಅನುಮೋದನೆ ನೀಡಿತ್ತು.
ತಿರುಮಲ ಗರ್ಭಗುಡಿಯಲ್ಲಿ ಹತ್ತಿರದಿಂದ ಶ್ರೀನಿವಾಸನ ದರ್ಶನ
ಶ್ರೀನಿವಾಸನ್ ಅವರು ತಿರುಮಲ ವೆಂಕಟೇಶ್ವರಸ್ವಾಮಿ ಅವರೊಂದಿಗೆ ಬೇರೆ ಬೇರೆ ದೇವರ ಮೂರ್ತಿಗಳ ಚಿತ್ರಗಳನ್ನು ಬಿಡಿಸಿದ್ದರು. ಅವರ ದೇವತಾ ಚಿತ್ರಗಳು ಹಲವರ ಮೆಚ್ಚುಗೆ ಗಳಿಸಿತ್ತು. ತಿರುಮಲ ಶ್ರೀವಾರಿ ಚಿತ್ರಗಳನ್ನು ಬಿಡಿಸುವ ಮೂಲಕ ಅವರ ಖ್ಯಾತಿ ಹೆಚ್ಚಾಗಿತ್ತು. ಶ್ರೀನಿವಾಸನ್ ಅವರಿಗೆ ತಿರುಮಲ ಗರ್ಭಗುಡಿಯಲ್ಲಿ ಕುಳಿತು ದೇವರ ಮೂರ್ತಿಯನ್ನು ಹತ್ತಿರದಿಂದ ನೋಡುವ ಅದ್ಭುತ ಅವಕಾಶ ಸಿಕ್ಕಿತ್ತು.
ಮನೆ ಮನೆ ತಲುಪಿದ್ದ ತಿರುಮಲ ತಿಮ್ಮಪ್ಪ
ಶ್ರೀನಿವಾಸನ್ ಅವರು ಚಿತ್ರಗಳನ್ನು ರಚಿಸಿದ ಬಳಿಕ ಟಿಟಿಡಿ ಹಾಡುಗಳನ್ನು ತಯಾರಿಸಿತ್ತು. ಭಕ್ತರು ದಿನ ಬೆಳಗ್ಗೆ ಭಕ್ತಿಯೊಂದಿಗೆ ತಮ್ಮ ಮನೆಯಲ್ಲೇ ದೇವರ ನಾಮಸ್ಮರಣೆಗೆ ಇದು ಅವಕಾಶ ನೀಡಿತ್ತು. ಶ್ರೀನಿವಾಸನ್ ರಚಿಸಿದ್ದ ಎರಡು ಚಿತ್ರಗಳನ್ನು ಟಿಟಿಡಿ ಕ್ಯಾಲೆಂಡರ್ನಲ್ಲಿ ಮುದ್ರಿಸಿ ಬಿಡುಗಡೆ ಮಾಡಿತ್ತು. ಶ್ರೀನಿವಾಸನ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯರು, ಪ್ರಮುಖರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ತಿರುಮಲ ಶ್ರೀನಿವಾಸನ ಅದ್ಭುತ ರೂಪವನ್ನು ರಚಿಸಿದ ಕಲಾವಿದರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ












