ಮುಂಬೈ (ಅ. 19): ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಎರಡು ದಿನ ಬಾಕಿಯಿರುವಾಗ ಬಾಲಿವುಡ್ ಸಲ್ಮಾನ್ ಖಾನ್ ಬಾಡಿಗಾರ್ಡ, ಆಪ್ತ ಸ್ನೇಹಿತ ಗುರ್ಮೀತ್ ಸಿಂಗ್ ಇಂದು ಶಿವಸೇನೆ ಸೇರಿದ್ದಾರೆ. 

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಎಲ್ಲರ ಸಮ್ಮುಖದಲ್ಲಿ ಶಿವಸೇನೆ ಸೇರಿದ್ದಾರೆ. ಶಿವಸೇನೆ ಇದನ್ನು ಟ್ವಿಟರ್ ಹ್ಯಾಂಡಲ್ ನಲ್ಲಿ ಅಧಿಕೃತಗೊಳಿಸಿದೆ. 

 

ಅಕ್ಟೋಬರ್ 21 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ. 

ಈ ಬಾರಿಯ ಶಿವಸೇನೆ ಪ್ರಣಾಳಿಕೆ ಗಮನ ಸೆಳೆದಿದೆ. ಶೇ. 30  ರಷ್ಟು ವಿದ್ಯುತ್ ದರ ಇಳಿಕೆ, ಕಡಿಮೆ ಬೆಲೆಗೆ ರಸಗೊಬ್ಬರಗಳು, ಕೀಟನಾಶಕ, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ, ಫಸಲ್ ಭೀಮಾ ಯೋಜನೆ ಜಾರಿ ಸೇರಿದಂತೆ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. 

ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಕ್ಷೇತ್ರಗಳಿವೆ. ಅದರಲ್ಲಿ 194 ರಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಗೆ ಗೆಲುವಾಗಲಿದೆ ಎಂದು ಎಬಿಸಿ- ಸಿವೋಟರ್ ಸಮೀಕ್ಷೆ ಹೇಳಿದೆ.