ಸಹೋದರರಿಗೆ ಸಿಕ್ಕ ಚಿನ್ನದ ಮೀನು : ಬೆಲೆ ಎಷ್ಟು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 12:53 PM IST
Maharashtra Brothers Sale Fish For 5 Lakh
Highlights

ಈ ಇಬ್ಬರು ಸಹೋದರರು ಮೀನಿಗಾಗಿ ಬಲೆ ಬೀಸಿದಾಗ ಭಾರೀ ಅದೃಷ್ಟವೊಂದು ಅವರ ಬೆಲೆಯಲ್ಲಿ ಸಿಲುಕಿತು. ಔಷಧಕ್ಕಾಗಿ ಉಪಯೋಗಿಸುವ ಮೀನೊಂದು ಬಲೆಗೆ ಬಿದ್ದು ಬರೋಬ್ಬರಿ 5.5 ಲಕ್ಷ ರು.ಗೆ ಮಾರಾಟವಾಗಿದೆ. 

ಬೆಂಗಳೂರು : ಕೆಲವೊಮ್ಮೆ ಎಷ್ಟು ಬಲೆ ಬೀಸಿದರೂ ಒಂದು ಮೀನೂ ಸಿಕ್ಕುವುದಿಲ್ಲ. ಆದರೆ, ಇಲ್ಲೊಂದು ಸಹೋದರರು ಚಿನ್ನದ ಮೀನಿಗೆ ಬಲೆ ಬೀಸಿದ್ದಾರೆ. ಮಹಾರಾ ಷ್ಟ್ರದ ಮಹೇಶ್ ಮೆಹರ್ ಮತ್ತು ಭರತ್ ಮೆಹೆರ್ ಎನ್ನುವವರು ಎಂದಿನಂತೆ ಶುಕ್ರವಾರ ಮೀನು ಹಿಡಿಯಲು ಹೋಗಿದ್ದರು. 

ಆದರೆ, ಅವರಿಗೆ ಸಿಕ್ಕಿದ್ದು 30 ಕೆ.ಜಿ. ತೂಲದ ಘೋಲ್ ಮೀನು. ಔಷಧಕ್ಕೆ ಬಳಸುವ ಈ ಮೀನಿಗೆ ಭಾರೀ ಬೇಡಿಕೆ ಇರುವುದರಿಂದ ಅದನ್ನು ಹಾರಾಜು ಹಾಕಲಾಗಿದ್ದು, 5.5 ಲಕ್ಷ ರು.ಗಳಿಗೆ ಮಾರಾಟವಾಗಿದೆ.

ಇದರಿಂದ ಈ ಸಹೋದರರಿಗೆ ಭರ್ಜರಿ ಅದೃಷ್ಟವೇ ಬಲೆಗೆ ಬಿದ್ದಂತಾಗಿದೆ. 

loader