20 ಅಡಿ ಉದ್ದ ಮತ್ತು 700 ಕೆಜಿ ತೂಕದ ಅಪರೂಪದದ ಗರಗಸ ಮೀನೊಂದು ಮಹಾರಾಷ್ಟ್ರದಲ್ಲಿ ಬೆಸ್ತರ ಬಲೆಗೆ ಬಿದ್ದಿದೆ. ಇದನ್ನ ಸಾ ಫಿಶ್ ಅಂತಲೂ ಕರೆಯುತ್ತಾರೆ.
ಮಹಾರಾಷ್ಟ್ರ(ಮಾ.29): 20 ಅಡಿ ಉದ್ದ ಮತ್ತು 700 ಕೆಜಿ ತೂಕದ ಅಪರೂಪದದ ಗರಗಸ ಮೀನೊಂದು ಮಹಾರಾಷ್ಟ್ರದಲ್ಲಿ ಬೆಸ್ತರ ಬಲೆಗೆ ಬಿದ್ದಿದೆ. ಇದನ್ನ ಸಾ ಫಿಶ್ ಅಂತಲೂ ಕರೆಯುತ್ತಾರೆ.
ಮಹಾರಾಷ್ಟ್ರದ ಕೊಂಕಣ ಪ್ರಾಂತ್ಯದ ಸಿಂಧೂದುರ್ಗಾ ಜಿಲ್ಲೆಯ ಸಾಗರ ಪ್ರದೇಶದಲ್ಲಿ ಈ ಮೀನು ಕಂಡುಬಂದಿದೆ. ವಿಜಯದುರ್ಗ ಸಮುದ್ರದಲ್ಲಿ ಕೊಂಕಣ ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಗರಗಸದಂಥ ತೀಕ್ಷ್ಣ ಹಲ್ಲುಗಳ ಮುಖವಿರುವ ಅತ್ಯಂತ ವಿರಳವಾದ ಈ ಮೀನು ಕಂಡಿದ್ದು, ಮುನಾವರ್ ಮುಜೀರ್ ಎಂಬುವರು ಬೀಸಿದ ಬಲೆಯಲ್ಲಿ ಸಿಕ್ಕಿಬಿದ್ದಿದೆ.
ವಿಜಯದುರ್ಗದಲ್ಲಿ ಅಗಾಗ ಅಪರೂಪದ ಮತ್ಸ್ಯ ಸಂಕುಲಗಳು ಬಲೆಗೆ ಬೀಳುತ್ತಿವೆಯಾದರೂ, ಅವನತಿಯ ಅಂಚಿನಲ್ಲಿರುವ ಗರಗಸ ಮೀನು ಪತ್ತೆಯಾಗಿರುವುದು ಇದೇ ಮೊದಲು.
