ನೀತಿ ಸಂಹಿತೆ ಉಲ್ಲಂಘಿಸಿದ್ರಾ ಜೆಡಿಎಸ್ ಶಾಸಕ? ಬಡಾವಣೆ ಜನರಿಗೆ ಪ್ರವಾಸ ’ಭಾಗ್ಯ’!

Mahalakshmi Layout JDS MLA Gopalaiah Offer
Highlights

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ  ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.  ಮಹಾಲಕ್ಷ್ಮೀ ಬಡಾವಣೆ ಜನರಿಗೆ ಪ್ರವಾಸ ’ಭಾಗ್ಯ’ ನೀಡಿದ್ದಾರೆ. 

ಬೆಂಗಳೂರು (ಏ. 02):  ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ  ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.  ಮಹಾಲಕ್ಷ್ಮೀ ಬಡಾವಣೆ ಜನರಿಗೆ ಪ್ರವಾಸ ’ಭಾಗ್ಯ’ ನೀಡಿದ್ದಾರೆ. 

ನೀತಿ ಸಂಹಿತೆ ಉಲ್ಲಂಘಿಸಿ  ಮಹಾಲಕ್ಷ್ಮೀ ಲೇಔಟ್,  ನಂದಿನಿ ಲೇಔಟ್, ವೃಷಬಾವತಿ  ನಗರ,  ನಾಗಪುರ, ಮಹಾಲಕ್ಷ್ಮಿ ಪುರಂ, ಶಂಕರಮಠ, ಶಕ್ತಿ ಗಣಪತಿನಗರ, ಮರಿಯಪ್ಪನ ಪಾಳ್ಯ ಜನರಿಗೆ ಟೂರ್ ಭಾಗ್ಯ ನೀಡಿದ್ದಾರೆ.  ಹತ್ತಾರು  ಬಸ್’ಗಳಲ್ಲಿ ಮತದಾರರು  ಪ್ರವಾಸಕ್ಕೆ ತೆರಳಿದ್ದಾರೆ. 

ನೀತಿ  ಸಂಹಿತೆ ಉಲ್ಲಂಘಿಸಿದಕ್ಕೆ ಜೆಡಿಎಸ್ ಶಾಸಕ ಗೋಪಾಲಯ್ಯ ವಿರುದ್ಧ   ಬಿಜೆಪಿ ದೂರು ದಾಖಲಿಸಿದೆ.  ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡರು  ದೂರು ನೀಡಿದ್ದಾರೆ. 
 

loader