ಮಾತುಕತೆಗೆ ದಿನಾಂಕ ನಿಗದಿಪಡಿಸುವ ವಿಚಾರವಾಗಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಗೋವಾ ಮತ್ತು‌ ಮಹಾರಾಷ್ಟ್ರ ಸಿಎಂಗಳಿಗೆ ಪತ್ರ ಬರೆದಿದ್ದರು. ಆದರೆ ವಿಳಂಬವಾಗಿ ಅದಕ್ಕೆ ಪ್ರತಿಕ್ರಿಯಿಸಿರುವ ಗೋವಾ ಸರ್ಕಾರ ಮಹದಾಯಿ ವಿಚಾರದಲ್ಲಿ ರಾಜಿಗೆ ಸಿದ್ದವಿಲ್ಲ ಎಂದು ಹೇಳಿದೆ. ಪತ್ರವೊಂದನ್ನು ಬಿಡುಗಡೆ ಮಾಡಿರುವ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್, ಕರ್ನಾಟಕ ಮಾತುಕತೆಯ ಮಾತನಾಡಿ ಡರ್ಟಿ ಟ್ರಿಕ್ಸ್ ಮಾಡ್ತಿದೆ ಎಂದು ಹೇಳುವ ಮೂಲಕ ಕರ್ನಾಟಕದ ಪ್ರಯತ್ನಕ್ಕೆ ತಣ್ಣೀರು ಎರಚಿದೆ.
ಪಣಜಿ(ಜು.18): ಮಹದಾಯಿ ವಿವಾದವನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಿಕೊಳ್ಳುವ ಕರ್ನಾಟಕದ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ. ಕೋರ್ಟ್'ನಿಂದ ಹೊರಗೆ ವಿವಾದ ಬಗೆಹರಿಸಲು ಸಾದ್ಯವಿಲ್ಲ ಎಂದು ಗೋವಾ ಸರ್ಕಾರ ಉದ್ದಟತನದಿಂದಲೇ ಉತ್ತರಿಸಿದೆ.
ಮಾತುಕತೆಗೆ ದಿನಾಂಕ ನಿಗದಿಪಡಿಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳಿಗೆ ಪತ್ರ ಬರೆದಿದ್ದರು. ಆದರೆ ವಿಳಂಬವಾಗಿ ಅದಕ್ಕೆ ಪ್ರತಿಕ್ರಿಯಿಸಿರುವ ಗೋವಾ ಸರ್ಕಾರ ಮಹದಾಯಿ ವಿಚಾರದಲ್ಲಿ ರಾಜಿಗೆ ಸಿದ್ದವಿಲ್ಲ ಎಂದು ಹೇಳಿದೆ. ಪತ್ರವೊಂದನ್ನು ಬಿಡುಗಡೆ ಮಾಡಿರುವ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್, ಕರ್ನಾಟಕ ಮಾತುಕತೆಯ ಮಾತನಾಡಿ ಡರ್ಟಿ ಟ್ರಿಕ್ಸ್ ಮಾಡ್ತಿದೆ ಎಂದು ಹೇಳುವ ಮೂಲಕ ಕರ್ನಾಟಕದ ಪ್ರಯತ್ನಕ್ಕೆ ತಣ್ಣೀರು ಎರಚಿದೆ.
ಮಹದಾಯಿ ವಿಚಾರದಲ್ಲಿ ಕೋರ್ಟ್ ಸೂಚನೆಯಂತೆ ನ್ಯಾಯಾಲಯದಿಂದ ಹೊರಗೆ ವಿವಾದ ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ. ಇದು ನನ್ನ ನೇತೃತ್ವದ ಜಲಸಂಪನ್ಮೂಲ ಇಲಾಖೆ ಮತ್ತು ಗೋವಾ ಸರ್ಕಾರದ ನಿಲುವುವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬರೆದಿರುವ ಪತ್ರಕ್ಕೆ ನಮ್ಮ ಮುಖ್ಯಮಂತ್ರಿ ಉತ್ತರ ನೀಡುತ್ತಾರೆ. ಕರ್ನಾಟಕ ಒಂದೆಡೆ ಸೌಹಾರ್ದ ಮಾತುಕತೆ ಬಗ್ಗೆ ಹೇಳಿ ಮತ್ತೊಂದೆಡೆ ಡರ್ಟಿ ಟ್ರಿಕ್ಸ್ ಮಾಡ್ತಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್' ಅವರು ಹೇಳಿಕೆ ನೀಡಿದ್ದಾರೆ.
ಇನ್ನು ಗೋವಾ ಸಚಿವರ ನಿಲುವಿಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿದ್ದರೆ ಮಾತ್ರ ಸಮಸ್ಯೆ ಬಗ್ಗೆ ಹರಿಯುತ್ತೆ ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ಕರ್ನಾಟಕ ಮಹದಾಯಿ ವಿವಾದ ಬಗೆ ಹರಿಸಲು ಯತ್ನಿಸಿದ್ರು, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರ ಮಾತ್ರ ಕರ್ನಾಟಕದ ಸೌಹಾರ್ದತೆಯನ್ನೇ ಕೆಟ್ಟದಾಗಿ ಬಿಂಬಿಸಿರೋದು ನೋವಿನ ಸಂಗತಿ.
