Asianet Suvarna News Asianet Suvarna News

ಮಹಾದಾಯಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮಂಗಳವಾರ ನ್ಯಾಯಾಧಿಕರಣವು ಫೆ.8ರಿಂದ 22ರವರೆಗೆ ಅಂತಿಮ ವಿಚಾರಣೆ ನಡೆಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದರೆ ಪ್ರಕರಣದಲ್ಲಿನ ಭಾಗಿದಾರ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ವಿವರವಾದ ವಾದ ಮಂಡನೆಗೆ ಇನ್ನಷ್ಟು ಸಮಯ ಬೇಕು ಎಂದು ಎಂದು ಪ್ರತಿಪಾದಿಸಿವೆ.

Mahadayi River Water Sharing Dispute Tribunal Postpone tomorrow

ನವದೆಹಲಿ(ಫೆ.07): ಮಹದಾಯಿ ನದಿ ನೀರು ಹಂಚಿಕೆಯ ಬಗೆಗಿನ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳ ತಕರಾರಿನ ಬಗ್ಗೆ ಅಂತಿಮ ವಿಚಾರಣೆ ಫೆ.8ರಿಂದ ನಡೆಸುವುದಾಗಿ ಮಹದಾಯಿ ನದಿ ನೀರು ನ್ಯಾಯಾಧಿಕರಣ ಹೇಳಿದೆ.

ಮಂಗಳವಾರ ನ್ಯಾಯಾಧಿಕರಣವು ಫೆ.8ರಿಂದ 22ರವರೆಗೆ ಅಂತಿಮ ವಿಚಾರಣೆ ನಡೆಸುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದರೆ ಪ್ರಕರಣದಲ್ಲಿನ ಭಾಗಿದಾರ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ವಿವರವಾದ ವಾದ ಮಂಡನೆಗೆ ಇನ್ನಷ್ಟು ಸಮಯ ಬೇಕು ಎಂದು ಎಂದು ಪ್ರತಿಪಾದಿಸಿವೆ. ಆದರೆ ನಾವು ಆ.20ರೊಳಗೆ ತೀರ್ಪು ನೀಡಬೇಕಿದೆ. ಈ ತೀರ್ಪಿಗೆ ಸೂಕ್ತ ಕಾರಣಗಳು, ಆಧಾರಗಳನ್ನು ನೀಡಬೇಕಿದ್ದು ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಜೆ.ಎಂ.ಪಾಂಚಾಳ್ ನೇತೃತ್ವದ ನ್ಯಾಯಾಧಿಕರಣ ಸ್ಪಷ್ಟಪಡಿಸಿದೆ.

ಈ ಮಧ್ಯೆ ಗೋವಾವು ಕರ್ನಾಟಕದ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ದೂರಿಗೆ ಕರ್ನಾಟಕ ಪ್ರತಿಕ್ರಿಯೆ ಸಲ್ಲಿಸಿತ್ತು.ಇದಕ್ಕೆ ಸಮಯಾವಕಾಶ ಬೇಕಿದೆ ಎಂದು ಗೋವಾದ ಪರ ವಕೀಲ ಆತ್ಮಾರಾಮ ನಾಡಕರ್ಣಿ ನ್ಯಾಯಾಧಿಕರಣವನ್ನು ಕೋರಿದರು.ಈ ಬಗ್ಗೆ ಫೆ.13ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

Follow Us:
Download App:
  • android
  • ios