ಮಹದಾಯಿ ವಿಚಾರವಾಗಿ ಅ.21 ರಂದು ಮುಂಬೈನಲ್ಲಿ ನಡೆಯಬೇಕಿದ್ದ 3 ರಾಜ್ಯಗಳ‌ ಸಿಎಂ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ಸಭೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಬೆಂಗಳೂರು (ಅ.19): ಮಹದಾಯಿ ವಿಚಾರವಾಗಿ ಅ.21 ರಂದು ಮುಂಬೈನಲ್ಲಿ ನಡೆಯಬೇಕಿದ್ದ 3 ರಾಜ್ಯಗಳ‌ ಸಿಎಂ ಸಭೆಯನ್ನು ಮುಂದೂಡಲಾಗಿದೆ. ಮುಂದಿನ ಸಭೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

ಅ.21ರಂದು ಮುಂಬೈನಲ್ಲಿ ನಡೆಯಬೇಕಿದ್ದ 3 ರಾಜ್ಯಗಳ‌ ಸಿಎಂ ಸಭೆ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ಕರೆಯಲಾಗಿತ್ತು. ರಾಜ್ಯ ಸರ್ಕಾರ ಪ್ರಸ್ತಾಪಿಸಬೇಕಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸರ್ವಪಕ್ಷ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ, ಮಹಾರಾಷ್ಟ್ರ ಮತ್ತು ಗೋವಾ ಸಿಎಂಗೆ ಪತ್ರ ಬರೆದಿದ್ದೆ. ಮಹಾರಾಷ್ಟ್ರ ಸಿಎಂ ಫೋನ್ ಮೂಲಕ ಮಾತನಾಡಲು ಸಿಕ್ಕಿದ್ದರು. ಗೋವಾ ಸಿಎಂ ಫೋನ್​

ಮೂಲಕ ಮಾತನಾಡಲು ಸಿಕ್ಕಿಲ್ಲ. ಇಂದು ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಕೋರ್ಟ್ ಹೊರಗೆ ಇತ್ಯರ್ಥಕ್ಕೆ ಸಲಹೆ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಕಾರಾತ್ಮಕ ನಿಲುವಿನೊಂದಿಗೆ ಸಭೆಗೆ ಹೋಗಲು ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ನಿಲುವು ಕೂಡಾ ಅದೇ ಆಗಿತ್ತು.

ಕಾನೂನು, ತಾಂತ್ರಿಕ ತಂಡಗಳ ಜತೆ ಚರ್ಚೆ ಮಾಡಿ ಮುಂದುವರಿಯುತ್ತೇವೆ. ಕೇವಲ ಕುಡಿಯುವ ನೀರಿನ ವಿಚಾರವನ್ನು ಮಾತ್ರ ಪ್ರಸ್ತಾಪಿಸಲ್ಲ. ಇಡೀ ಯೋಜನೆಯ ಕುರಿತು ರಾಜ್ಯದ ಪರವಾಗಿ ಪ್ರಸ್ತಾಪಿಸುತ್ತೇನೆ ಎಂದು

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.