ಪ್ರಯಾಗ್‌ರಾಜ್ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ ಸ್ನಾನದಂದು ಕಾಲ್ತುಳಿತ ಸಂಭವಿಸಿ ಸಾವುನೋವು ಉಂಟಾಗಿದೆ. ಈ ದುರ್ಘಟನೆಗೆ ಜನಸಂದಣಿ ಹಾಗೂ ಮಾನಸಿಕ ಅಸ್ಥಿರತೆ ಕಾರಣ ಎನ್ನಲಾಗಿದೆ. ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ, ಪರಿಹಾರ ಘೋಷಿಸಿದ್ದಾರೆ. ಈ ಘಟನೆಯನ್ನು ಮೊದಲೇ ಭವಿಷ್ಯ ನುಡಿಯಲಾಗಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Mahakumbha Mela) ಕಾಲ್ತುಳಿತ ಉಂಟಾಗಿದ್ದು, ಸಾವು ನೋವುಗಳು ಸಂಭವಿಸಿದ್ದು ಬಹುತೇಕರಿಗೆ ಗೊತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವ್ರು ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಮಹಾಕುಂಭ ಮೇಳದಲ್ಲಿ ಇದ್ದಕ್ಕಿದ್ದಂತೆ ಯಾಕೆ ಕಾಲ್ತುಳಿತ (Stampede) ಉಂಟಾಯ್ತು? ಸಾವುನೋವು ಉಂಟಾಗಲು ನಿಜವಾದ ಕಾರಣವೇನು? 

ಈ ಬಗ್ಗೆ ಈಗಾಗಲೇ ಭವಿಷ್ಯ ಹೇಳಲಾಗಿತ್ತು ಎನ್ನಲಾಗುತ್ತಿದೆ. ಜನವರಿ 29ರಂದು ವರ್ಷದ ಮೊದಲ ಅಮಾವಾಸ್ಯೆ. ಇದನ್ನು ಮೌನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮಾವಾಸ್ಯೆಯಂದು ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ಸಹಜವಾಗಿಯೇ ಹೆಚ್ಚು ಜನರು ನಿನ್ನೆ ರಾತ್ರಿಯಿಂದಲೇ ಗಂಗಾನದಿಯ ಸಂಗಮದ ತಟದಲ್ಲಿ ಬೀಡುಬಿಟ್ಟಿದ್ದರು. 

ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ 25 ಲಕ್ಷ ಪರಿಹಾರ, ನ್ಯಾಯಾಂಗ ತನಿಖೆಗೆ ಆದೇಶಿಸಿದ ಯೋಗಿ!

ಇಷ್ಟು ದಿನ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದರೂ ನಿನ್ನೆ ರಾತ್ರಿ ಬಹಳಷ್ಟು ಜನರು ಅಲ್ಲಿ ಸೇರಿ 12 ಗಂಟೆ ಕಳೆದು ಅಮಾವಾಸ್ಯೆ ಬರುವುದನ್ನೇ ಕಾಯುತ್ತಿದ್ದರು. ಹೀಗಾಗಿ, ಇವತ್ತು ಬೆಳಗಿನ ಜಾವ ಶುರುವಾಗುತ್ತಿದ್ದಂತೆ ಅಲ್ಲಿ ನೂಕುನುಗ್ಗಲು ಶುರುವಾಗಿದೆ. ಪೊಲೀಸರು ಅದೇನೇ ಕಂಟ್ರೋಲ್ ಮಾಡುತ್ತಿದ್ದರೂ ಸುಮಾರು 10 ಕೋಟಿ ಜನರು ಓಡಾಡುತ್ತಿದ್ದ ಜಾಗದಲ್ಲಿ ಕಾಲ್ತುಳಿತ ಉಂಟಾಗಿ ಸಾವುನೋವು ಸಂಭವಿಸಿದೆ. ಹಾಗಿದ್ದರೆ ಇದನ್ನು ಮೊದಲೇ ಊಹಿಸಲಾಗಿತ್ತೇ? ಊಹಿಸಿದ್ದಲ್ಲ, ಭವಿಷ್ಯ ಕೂಡ ಹೇಳಲಾಗಿತ್ತು ಎನ್ನಲಾಗಿದೆ. 

ನಾವು ಹೇಳುವ ಮಾಡರ್ನ್‌ ಸೈನ್ಸ್‌ ಕೂಡ ಚಂದ್ರನಿಂದ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದನ್ನು ದೃಢ ಪಡಿಸುತ್ತದೆ. ಅದೇ ರೀತಿ, ವರ್ಷದ ಮೊದಲ ಅಮಾವಾಸ್ಯೆಯಂದು ಕುಂಭಮೇಳ ನಡೆಯುವ ಜಾಗದಲ್ಲಿ ಸಾವುನೋವು ಸಂಭವಿಸುತ್ತದೆ ಎಂದು ಈಗಾಗಲೇ ಭವಿಷ್ಯ ನುಡಿಯಲಾಗಿತ್ತು ಎನ್ನಲಾಗಿದೆ. ಸರಿಯಾಗಿ ನುಡಿದ ಭವಿಷ್ಯ ಯಾವತ್ತೂ ಸುಳ್ಳಾಗೋದಿಲ್ಲ ಎನ್ನುವುದು ನಿಜ. ಅದರಂತೆ, ಸರಿಯಾಗಿ ಅಮಾವಾಸ್ಯೆಯಂದೇ, ಅದೇನು ಹೇಳಲಾಗಿತ್ತೋ ಅದು ಆಗಿದೆ ಎಂದು ಬಹಳಷ್ಟು ಜ್ಯೋತಿಷಿಗಳು ನುಡಿದಿದ್ದಾರೆ. 

ನಾಗಾಸಾಧುಗಳಿಗೂ ಸನಾತನ ಧರ್ಮ ರಕ್ಷಣೆಗೂ ಸಂಬಂಧವೇನು? ಈ ರಹಸ್ಯ ತಿಳಿದುಕೊಳ್ಳಿ!

ಇಂದಿನ ಘಟನೆಯಲ್ಲೂ ಕೂಡ ಅದೇ ಆಗಿದೆ. ಕೆಲವರ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಸಂಭವಿಸಿ, ಅವರು ಕಳೆದುಕೊಂಡ ಮಾನಸಿಕ ಸ್ಥಿಮಿತದ ಕಾರಣಕ್ಕೆ ಹೀಗೆ ನೂಕುನುಗ್ಗಲು ಶುರುವಾಗಿದೆ. ಅದರಿಂದ ಎಲ್ಲರೂ ದಿಕ್ಕಾಪಾಲಾಗಿ ಓಡಾಡಲು ತೊಡಗಿಕೊಂಡು ಇಂದಿನ ಅವಘಡ ನಡೆದಿದೆ. ಆದರೆ, ಇವತ್ತು ಅಮಾವಾಸ್ಯೆ ಆಗಿಲ್ಲದಿದ್ದರೆ ಬೇರೆ ದಿನಗಳಂತೆ ಇಂದೂ ಕೂಡ ಅದೆಷ್ಟೇ ಜನರು ಸೇರಿಕೊಂಡಿದ್ದರೂ ಯಾವುದೇ ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಭವಿಷ್ಯ ನಿಜವಾಗಿದೆ!