ಮಧುರೈ(ಡಿ.6): ಹಳೆಯ 1000 ಮತ್ತು 500 ರೂ.ಗಳನ್ನು ಬ್ಯಾನ್ ಮಾಡಿದ ನಂತರ ದೇಶದಲ್ಲಿ ಚಿಲ್ಲರೆ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಹೊಸದಾಗಿ ಬಂದಿರುವ 2000 ರೂ.ಗೂ ಚಿಲ್ಲರೆ ಸಿಗುತ್ತಿಲ್ಲ. ಈ ಚಿಲ್ಲರೆ ಸಮಸ್ಯೆಯಿಂದಾಗಿ ಹಲವು ಕಡೆ ಗಂಭೀರ ಸಮಸ್ಯೆಗಳ ಜೊತೆಗೆ ತಮಾಷೆಯ ಸಂಗತಿಗಳು ಘಟಿಸುತ್ತಿವೆ. ಅಂತಹ ನಗೆಯ ಸನ್ನೀವೇಷವೊಂದು ಮಧುರೈನಲ್ಲಿ ನಡೆದಿದೆ.

ಮಧುರೈ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಬಳಸಿದ ಭೂಪನೊಬ್ಬ ಚಿಲ್ಲರೆ ಇಲ್ಲದ ಕಾರಣ  5 ರೂ.ಗಳ ಚೆಕ್ ನೀಡಿದ್ದಾನೆ. ಈತ ನೀಡಿರುವ ಆ ಚೆಕ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.