ಎಐಎಡಿಎಂಕೆ ಶಾಸಕರನ್ನು ರೆಸಾರ್ಟ್’ನಲ್ಲಿ ಬಲವಂತವಾಗಿ ಕೂಡಿಡಲಾಗಿರುವ ಬಗ್ಗೆ ಸಾಕ್ಷಿಯನ್ನು ಹಾಗೂ ವಿಶ್ವಾಸ ಮತಯಾಚನೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗನ್ನು ಒದಗಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ಚೆನ್ನೈ (ಫೆ.22): ಕಳೆದ ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯನ್ನು ರದ್ದುಗೊಳಿಸುವಂತೆ ಕೋರಿ ಡಿಎಂಕೆ ಹಾಗೂ ವಕಿಲರ ಸಂಘವು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಮದ್ರಾಸ ಹೈಕೋರ್ಟ್, ವಾದವನ್ನು ಪುಷ್ಠಿಕರಿಸುವಂತಹ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಎಐಎಡಿಎಂಕೆ ಶಾಸಕರನ್ನು ರೆಸಾರ್ಟ್’ನಲ್ಲಿ ಬಲವಂತವಾಗಿ ಕೂಡಿಡಲಾಗಿರುವ ಬಗ್ಗೆ ಸಾಕ್ಷಿಯನ್ನು ಹಾಗೂ ವಿಶ್ವಾಸ ಮತಯಾಚನೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗನ್ನು ಒದಗಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಹಲವಾರು ನಿಯಮಗಳನ್ನು ಗಾಲಿಗೆ ತೂರಲಾಗಿದೆಯೆಂದು ವಕೀಲರ ಸಂಘದ ಪರ ಕೆ. ಬಾಲು ವಾದಿಸಿದರು.
ಗೋಲ್ಡನ್ ಬೇ ರೆಸಾರ್ಟ್’ನಲ್ಲಿ ಬಲವಂತವಾಗಿ ಕೂಡಿಡಲಾಗಿತ್ತೆಂದು ಸ್ವತ: ಅಣ್ಣಾ ಡಿಎಂಕೆ ಶಾಸಕರು ಆರೋಪಿಸಿರುವ ಬಗ್ಗೆ ನಮ್ಮ ಬಳಿ ಸಾಕ್ಷಿಯಿರುವುದಾಗಿ ಬಾಲು ಹೈಕೋರ್ಟ್ ಮುಂದೆ ವಾದಿಸಿದರು, ಹಾಗೂ ಸೋಮವಾರ ಅದನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವುದಾಗಿ ಹೇಳಿದ್ದಾರೆ.
ಕಳೆದ ಶನಿವಾರ ಸದನದಲ್ಲಿ ನಡೆದ ಹೈಡ್ರಾಮಾದಲ್ಲಿ ಶಶಿಕಲಾ ಆಪ್ತ ಇ,ಪಳನಿಸ್ವಾಮಿ 122 ಮತಗಳನ್ನು ಪಡೆಯುವ ಮೂಲಕ ವಿಶ್ವಾಸ ಮತವನ್ನು ಗೆದ್ದಿದ್ದರು.