ಭೋಪಾಲ್ :  ಟ್ರಾಫಿಲ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ ತಾನು ಮುಖ್ಯಮಂತ್ರಿ  ಬಾಮೈದಾ ಎಂದು ಹೇಳಿ ಪೊಲೀಸರಿಗೆ ಅವಾಜ್ ಹಾಕಿದ ವ್ಯಕ್ತಿಯನ್ನು ಮಧ್ಯ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಆತನ ತಪ್ಪನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ಅವಾಜ್ ಹಾಕಿದ ಆತ ತನ್ನ ವಾಹನಕ್ಕೆ ಸಂಬಂಧಿಸಿದ ದಾಖಲೆಯನ್ನು ನೀಡಲು ನಿರಾಕರಿಸಿದ್ದಾನೆ.  ತಾನು ಶಿವರಾಜ್  ಸಿಂಗ್ ಚೌಹಾಣ್ ಅವರ ಬಾಮೈದಾ ಎಂದು ಹೇಳಿದ್ದಾರೆ.

ರಾಜೇಂದ್ರ ಸಿಂಗ್ ಚೌಹಾಣ್ ಎನ್ನುವ ಆತ  ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಲ್ಲದೇ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಧೈರ್ಯ ಇದ್ದರೆ  ನನ್ನನ್ನು ಬಂಧಿಸಿ ಎಂದು ಹೇಳಿದ್ದಾನೆ. ಆದರೆ ಆತನ ಯಾವುದೇ ಅವಾಜ್ ಗೂ ಬಗ್ಗದ ಪೊಲೀಸರು ಆತನನ್ನು ಬಂಧಿಸಿದ್ದಾರೆ.  

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ನನಗೆ ರಾಜ್ಯದಲ್ಲಿ ಕೊಟ್ಯಂತರ ಮಂದಿ ಸಹೋದರಿಯರು ಇದ್ದಾರೆ. ಇದರಲ್ಲಿ ಯಾವ ಬಾಮೈದಾ ಎಂದು ಪತ್ತೆ ಮಾಡಲಿ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.