ಭೋಪಾಲ್[ಮೇ.18]: 12ನೇ ತರಗತಿಯಲ್ಲಿ ಫೇಲ್, ಆದರೂ ಈ ಫಲಿತಾಂಶ ಆ ಬಾಲಕನನ್ನು ಧೃತಿಗೆಡುವಂತೆ ಮಾಡಲಿಲ್ಲ. ತನ್ನ ಕನಸಿನ ಬೆನ್ನಟ್ಟಿದ ಆ ಬಾಲಕ ಇಂದು ಭಾರತದ ಅತ್ಯಂತ ಕಠಿಣ ಪರೀಕ್ಷೆಯನ್ನೆದುರಿಸಿದ ಆ ಬಾಲಕ ಇಂದು ಮುಂಬೈ ಪೊಲೀಸ್ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಜೀವನದಲ್ಲಿ ಕೊಂಚ ಹಿನ್ನಡೆಯಾದಾಗ ತಾನೇನು ಸಾಧಿಸಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಪ್ರತಿಯೊಬ್ಬರೂ ಓದಲೇಬೇಕಾದ ಸ್ಟೋರಿ. 

ಇವರು IPS ಅಧಿಕಾರಿ ಮನೋಜ್ ಕುಮಾರ್ ಶರ್ಮಾರ ಜೀವನಗಾಥೆ. ತನ್ನ ಕನಸಿನ ಬೆನ್ನಟ್ಟಿ, ಅಂದುಕೊಂಡದನ್ನು ಸಾಧಿಸಿರುವ ಈ ಪೊಲಿಸ್ ಅಧಿಕಾರಿಯ ಪ್ರೇರಣಾದಾಯಿ ಕತೆಯನ್ನೀಗ, ಅವರ ಗೆಳೆಯ ಹಾಗೂ ಕಂದಾಯ ಇಲಾಖೆಯ ಉಪ ಆಯುಕ್ತ ಅನುರಾಗ್ ಪಾಠಕ್ ಮುಂದಿನವಾರ '12th Fail' ಎಂಬ ಶೀರ್ಷಿಕೆಯಡಿ ಪುಸ್ತಕವೊಂದನ್ನು ಬಿಡುಗಡೆಗೊಳಿಸುತ್ತಿದ್ದಾರೆ.

ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ, ಬಿಲ್ಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮನೋಜ್ ಶರ್ಮಾ ಚಿಕ್ಕಂದಿನಿಂದಲೂ ಪರೀಕ್ಷೆ ಅಂಕಗಳು, ಫಲಿತಾಂಶಕ್ಕೆ ತಲೆಕೆಡಿಸಿಕೊಂಡವರೇ ಅಲ್ಲ. ಶಾಲೆಯಲ್ಲಿ ಪಡೆದ ಫಲಿತಾಂಶ ಯಶಸ್ಸಿನ ಮಾನದಂಡವಲ್ಲ ಎಂಬುವುದು ಅವರ ಅಭಿಪ್ರಾಯ. 10 ನೆ ತರಗತಿಯಲ್ಲಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಗಿದ್ದ ಶರ್ಮಾ, 11ನೇ ತರಗತಿಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದರು.

ಅದೇನಿದ್ದರೂ 42ವರ್ಷದ ಈ IPS ಆಫೀಸರ್ ತಮ್ಮ ಜೀವನದಾದ್ಯಂತ ತಮ್ಮ ಶೈಕ್ಷಣಿಕ ಫಲಿತಾಂಶ, ತಮ್ಮ ಯಶಸ್ಸಿನ ನಡುವಿನ ಅಡಚಣೆಯಾಗಿ ಪರಿಗಣಿಸಲಿಲ್ಲ. 'ಹೀಗಾಗೇ ನಾನು ಫೇಲ್ ಆದರೂ ನನಗೆ ಓದಬೇಕೆಂಬ ಆಸೆ ಇತ್ತು. ಅದರಂತೆ ಗ್ವಾಲಿಯರ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ನಡೆಸಿದೆ. ಅಷ್ಟೇ ಅಲ್ಲದೇ PhDಯನ್ನೂ ಮುಗಿಸಿದೆ' ಎಂಬುವುದು ಆಫೀಸರ್ ಶರ್ಮಾ ಮಾತಾಗಿದೆ. ಇದಾದ ಬಳಿಕ UPSC ಪರೀಕ್ಷೆಗೆ ಓದಲಾರಂಭಿಸಿದರು. ಈ ಹಾದಿ ಸುಗಮವಾಗಿರಲಿಲ್ಲ, ನಾಲ್ಕು ಬಾರಿ ಪರೀಕ್ಷೆ ಬರೆದ ಬಳಿಕ ಅವರು ತೇರ್ಗಡೆ ಹೊಂದಿದರು. 

ಖಡಕ್ ಡಿಸಿ, ಜನ ಮೆಚ್ಚಿದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ

ಶರ್ಮಾ ವಿದ್ಯಾರ್ಥಿಗಳು ಹಾಗೂ ಮಕ್ಕಳೊಂದಿಗೆ ಮಾತನಾಡುವ ಸಂದರ್ಭದಲ್ಲಿ 'ಯಾವತ್ತೂ ಸೋಲಿಗೆ ಹೆದರಬೇಡಿ' ಎನ್ನುತ್ತಾರೆ. ಅಲ್ಲದೇ ತಮ್ಮ ಜೀವನವನ್ನೇ ಉದಾಹರಣೆಯಾಗಿ ಅವರ ಮುಂದಿಡುತ್ತಾರೆ. ಸದ್ಯ ಶರ್ಮಾರ ಜೀವನವನ್ನು '12th Fail' ಎಂಬ ಶೀರ್ಷಿಕೆಯಡಿ ಪುಸ್ತಕ ರೂಪಕ್ಕಿಳಿಸುತ್ತಿರುವ ನುರಾಗ್ ಪಾಠಕ್ 'ಪರೀಕ್ಷೆಯಲ್ಲಿ ಫೇಲಾಗುವ ವಿದ್ಯಾರ್ಥಿಗಳು ಎದೆಗುಂದಬಾರದೆಂಬ ನಿಟ್ಟಿನಲ್ಲಿ ನಾನು ಈ ಪುಸ್ತಕ ಬಿಡುಗಡೆಗೊಳಿಸುತ್ತಿದ್ದೇನೆ. ಮನೋಜ್ ನನ್ನ ಪುಸ್ತಕದ ಹೀರೋ. ಇದರೊಂದಿಗೆ ಸೋಲಿನ ಬಳಿಕವೂ ತಮ್ಮ ಜೀವನದಲ್ಲಿ ಯಶಸ್ಸು ಕಂಡ ಇನ್ನೂ ಹಲವಾರು ಮಂದಿಯ ಜೀವನಗಾಥೆ ಈ ಪುಸ್ತಕದಲ್ಲಿದೆ' ಎಂದಿದ್ದಾರೆ.