ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

First Published Apr 24, 2019, 4:31 PM IST

ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ ರೂಪಾ. ಡಿ ಮೌಡ್ಗಿಲ್ ತಮ್ಮ ದಕ್ಷತೆಗೆ ಫೇಮಸ್. ಪೊಲೀಸ್ ಸೇವೆ ಮಾತ್ರವಲ್ಲದೇ, ಫ್ಯಾಷನ್ ಡಿಸೈನಿಂಗ್, ಮಾಡೆಲಿಂಗ್, ನೃತ್ಯ, ಗಾಯನ ಹೀಗೆ ನಾನಾ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭ್ರಷ್ಟರ ವಿರುದ್ಧ ಯವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವ ಈ ಲೇಡಿ ಸಿಂಗಂ, ಕರ್ನಾಟಕದ ಮೊದಲ IPS ಆಫೀಸರ್ ಆಗಿದ್ದಾರೆ. ಬಾಲ್ಯದಲ್ಲೇ IPS ಆಫೀಸರ್ ಆಗುವ ಕನಸು ಕಂಡಿದ್ದ ಇವರು ಎರಡು ಬಾರಿ ಮಿಸ್ ದಾವಣಗೆರೆ ಪಟ್ಟ ಗಳಿಸಿದರೂ ಫ್ಯಾಷನ್ ಲೋಕಕ್ಕೆ ಮರುಳಾಗಲಿಲ್ಲ. ಕಂಡ ಕನಸನ್ನು ನನಸಾಗಿಸಿ ಇತರರಿಗೆ ಆದರ್ಶರಾಗಿರುವ ಈ ಹೆಮ್ಮೆಯ ಪೊಲೀಸ್ ಅಧಿಕಾರಿಯ ಬಗ್ಗೆ ನಿಮಗೆ ತಿಳಿದಿರದ ಕೆಲ ಇಂಟರೆಸ್ಟಿಂಗ್ ಸಂಗತಿಗಳು