ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಬಂಗಾರಪ್ಪ ಅವರ ಪತ್ನಿ ದಿವಂಗತ ಶಾಕುಂತಲಾ ಬಂಗಾರಪ್ಪ ಅವರ ಜೊತೆ ಈ ಮೊದಲು ಮಾತುಕತೆ ನಡೆಸಿದ್ದಾಗ ಗುರುವಿನ ಋಣವನ್ನು ತೀರಿಸುವುದಾಗಿ ಮಾತುಕೊಟ್ಟಿದ್ದರಂತೆ.

ಬೆಂಗಳೂರು(ಮಾ.13): ಜೆಡಿಎಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಜೆಡಿಎಸ್'ಗೆ ಗುಡ್'ಬಾಯ್ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಕೆಲವು ದಿನಗಳ ಹಿಂದಷ್ಟೆ ಮಧು ಅವರು ಕಾಂಗ್ರೆಸ್ ಸೇರುವ ಊಹಾಪೋಹ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದನೆಲ್ಲ ಅವರು ಅಲ್ಲಗೆಳದಿದ್ದರು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಬಂಗಾರಪ್ಪ ಅವರ ಪತ್ನಿ ದಿವಂಗಂತ ಶಾಕುಂತಲಾ ಬಂಗಾರಪ್ಪ ಅವರ ಜೊತೆ ಈ ಮೊದಲು ಮಾತುಕತೆ ನಡೆಸಿದ್ದಾಗ ಗುರುವಿನ ಋಣವನ್ನು ತೀರಿಸುವುದಾಗಿ ಮಾತುಕೊಟ್ಟಿದ್ದರಂತೆ.ಆಗ ಮಧು ಅವರು ಕೂಡ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳನ್ನು ಯಾರೊಬ್ಬರು ತಿಳಿಸಿಲ್ಲ.

ಅಲ್ಲದೆ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರ ನೆಚ್ಚಿನ ಶಿಷ್ಯರಾಗಿದ್ದರು. ಡಿಕೆಶಿ ಅವರು ಬಂಗಾರಪ್ಪ ಅವರ ಮಂತ್ರಿಮಂಡಳದಲ್ಲಿ ಬಂಧೀಕಾನೆ ಹಾಗೂ ಗೃಹರಕ್ಷಕ ದಳ ರಾಜ್ಯ ಸಚಿವರಾಗಿದ್ದರು.ಡಿಕೆಶಿ ಗುರು ಋಣ ತೀರಿಸಲು ಅವರ ಪುತ್ರನನ್ನು ಕಾಂಗ್ರೆಸ್' ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಮಧು ಬಂಗಾರಪ್ಪ ಸೇರ್ಪಡೆಗೆ ಹಾಲಿ ಸಚಿವ ಹಾಗೂ ಶಿವಮೊಗ್ಗದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಸಹ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.