ಜೆಡಿಎಸ್‌ ಫ್ಲೆಕ್ಸ್‌ನಲ್ಲಿ ಹೈಕಮಾಂಡಿಗೆ ಸವಾಲಾಕಿದ್ದ ಅಂಬಿ ಫೋಟೋ!

First Published 15, Jun 2018, 1:40 PM IST
Maddur: Rebel Star Ambarish Photo in JDS Flecks
Highlights

  • ಡಿಸಿ ತಮ್ಮಣ್ಣ ಅವರಿಗೆ ಸ್ವಾಗತ ಕೋರುವ ಬ್ಯಾನರ್ ನಲ್ಲಿ ಅಂಬರೀಶ್ ಫೋಟೋ
  • ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಹೈಕಮಾಂಡಿಗೆ ಸವಾಲಾಕಿದ್ದ ಅಂಬಿ

ಮಂಡ್ಯ ಜೂನ್ 15: ಟಿಕೆಟ್ ಸಿಕ್ಕರೂ ಸ್ಪರ್ಧೆ ಮಾಡದೇ ಕಾಂಗ್ರೆಸ್ ಹೈ ಕಮಾಂಡಿಗೆ ಸವಾಲು ಎಸೆದಿದ್ದ ರೆಬಲ್ ಸ್ಟಾರ್ ಅಂಬರೀಶ್ ಫೋಟೋ ಈಗ ಜೆಡಿಎಸ್ ನಾಯಕರ ಪ್ಲೆಕ್ಸ್ ಗಳಲ್ಲಿ  ರಾರಾಜಿಸುತ್ತಿದೆ. 

ರಾಜಕಾರಣಕ್ಕೆ ಅಂಬಿ ವಿದಾಯ ಹೇಳುವ ಮಾತನ್ನಾಡಿದ್ದರು. ಕಾಂಗ್ರೆಸ್ ಪರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡದೇ ಅಂಬರೀಶ್ ಅಂತರ ಕಾಯ್ದುಕೊಂಡಿದ್ದರು. ಮಂಡ್ಯದಲ್ಲಿ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರದಲ್ಲೂ ಜೆ ಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರು,

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರ ಸ್ವಾಗತಕ್ಕೆ ಮದ್ದೂರಿನಲ್ಲಿ ಹಾಕಲಾಗಿರುವ ಪ್ಲೆಕ್ಸ್ ಗಳಲ್ಲಿ ಅಂಬಿ ಫೋಟೋ ರಾರಾಜಿಸುತ್ತಿದ್ದು ಇದನ್ನು ಕಂಡ ಕಾಂಗ್ರೆಸ್ಸಿಗರೇ ತಬ್ಬಿಬ್ಬಾಗಿದ್ದಾರೆ.

loader